ನವದೆಹಲಿ: ಪ್ರಧಾನಿಯವರ ಕರೆಗೆ ಓಗೊಟ್ಟಿರುವ ದೇಶದ ಜನಪ್ರಿಯ ಡೈರಿ ಸಂಸ್ಥೆಯಾದ ಅಮೂಲ್ ತನ್ನ ಕಾರ್ಟೂನ್ ಪೋಸ್ಟರ್ ಮೂಲಕ ಏಪ್ರಿಲ್ 5 ರಂದು 9 ಗಂಟೆಗೆ 9 ನಿಮಿಷ ದೀಪ ಬೆಳಗಿಸುವಂತೆ ಮಾಡಿಕೊಂಡ ಮನವಿಗೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ಟ್ವೀಟ್ ಮಾಡಿದ್ದ ಅಮೂಲ್, “ಬತ್ತಿ ಆಫ್, ಬಟರ್ ಆನ್” ವೈರಲ್ ಆಗಿದೆ. “ಡು ದಿ ಲೈಟ್ ಥಿಂಗ್’ ಎಂದು ಅದು ಹೇಳಿದೆ.
ಏಪ್ರಿಲ್ 5 ರಂದು 9 ಗಂಟೆಗೆ 9 ನಿಮಿಷಗಳ ಕಾಲ ವಿದ್ಯುತ್ ದೀಪಗಳನ್ನು ಆರಿಸಿ, ಕ್ಯಾಂಡಲ್, ಹಣತೆ, ಟಾರ್ಚ್ ಲೈಟ್, ಮೊಬೈಲ್ ಫ್ಲಾಶ್ ಲೈಟ್ ಅನ್ನು ಆನ್ ಮಾಡುವಂತೆ ಮೋದಿ ಮನವಿ ಮಾಡಿಕೊಂಡಿದ್ದಾರೆ.
ದೇಶವನ್ನು ಒಟ್ಟಿಗೆ ತರುವ ಸಲುವಾಗಿ ಮತ್ತು ಕರೋನಾ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಇದ್ದೇವೆ ಎಂಬುದನ್ನು ಪ್ರತಿಬಿಂಬಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಈ ಕರೆ ನೀಡಿದ್ದಾರೆ.
ಪ್ರಧಾನಿ ಮೋದಿಯವರು ಅಮೂಲ್ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಈ 9 ನಿಮಿಷಗಳ ಕಾಲ ಏಪ್ರಿಲ್ 5 ರಂದು 9 ಗಂಟೆಗೆ ಇಡೀ ದೇಶವನ್ನು ಹತ್ತಿರವಾಗಿಸುತ್ತದೆ ಮತ್ತು ಕೋವಿಡ್-19 ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
These 9 minutes, at 9 PM on the 5th will bring our nation closer and strengthen the battle against COVID-19. #IndiaFightsCorona https://t.co/ErwxzCn0bm
— Narendra Modi (@narendramodi) April 4, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.