ನವದೆಹಲಿ: ಭಾರತ ಸರಕಾರವು ಕೊರೋನಾವೈರಸ್ ವಿರುದ್ಧ ಒಂದು ದೀರ್ಘಕಾಲದ ಹೋರಾಟವನ್ನು ಆರಂಭಿಸಿದೆ. ಸರ್ಕಾರದ ಈ ಕಾರ್ಯಕ್ಕೆ ಭಾರತೀಯ ರೈಲ್ವೆ ಕೂಡ ಕೈಜೋಡಿಸಿದೆ. ಗ್ರಾಮೀಣ ಮತ್ತು ಕುಗ್ರಾಮ ಪ್ರದೇಶಗಳಿಗಾಗಿ ತನ್ನ ಬೋಗಿಗಳನ್ನು ಐಸೋಲೇಶನ್ ವಾರ್ಡ್ಗಳಾಗಿ ಪರಿವರ್ತಿಸಲು ರೈಲ್ವೆ ನಿರ್ಧರಿಸಿದೆ.
ಮಾತ್ರವಲ್ಲದೆ, ರೈಲ್ವೆಯ ತಯಾರಿಕಾ ಘಟಕಗಳಲ್ಲಿ ವೆಂಟಿಲೇಟರ್ಗಳನ್ನು ತಯಾರಿಸಲು ಕೂಡ ನಿರ್ಧರಿಸಲಾಗಿದೆ. ಪ್ರಸ್ತುತ ರೈಲ್ವೆಯು ತನ್ನ ಬೋಗಿಗಳನ್ನು ಇಸೋಲೇಶನ್ ವಾರ್ಡ್ಗಳಾಗಿ ಪರಿವರ್ತಿಸುವ ಮತ್ತು ತನ್ನ ತಯಾರಿಕಾ ಘಟಕಗಳಲ್ಲಿ ವೆಂಟಿಲೇಟರ್ಗಳನ್ನು ತಯಾರಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ.
ಕಪೂರ್ಥಲದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಎಲ್ಎಚ್ಬಿ ಬೋಗಿಗಳನ್ನು ಐಸೊಲೇಷನ್ ವಾರ್ಡ್ಗಳಾಗಿ ಪರಿವರ್ತಿಸುವ ಕಾರ್ಯಗಳು ಆರಂಭಗೊಂಡಿದೆ. ಮಾತ್ರವಲ್ಲದೇ, ಚೆನ್ನೈನಲ್ಲಿ ಇರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ವೆಂಟಿಲೇಟರ್ಗಳನ್ನು ತಯಾರು ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.
ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಮತ್ತು ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ ಯಾದವ್ ಅವರು ಮಾತುಕತೆಯನ್ನು ನಡೆಸಿದ್ದು, ಕೋವಿಡ್ -19 ಎದುರಿಸುವ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದರು. ಒಂದು ವೇಳೆ ಪರಿಸ್ಥಿತಿ ಗಂಭೀರ ಸ್ಥಿತಿಗೆ ಮರಳಿದರೆ ಗ್ರಾಮೀಣ ಭಾಗಗಳಲ್ಲಿ ಮತ್ತು ಕುಗ್ರಾಮ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ವೃದ್ಧಿಸುವುದು ಅನಿವಾರ್ಯವಾಗಲಿದೆ. ಹೀಗಾಗಿ ಯಾವುದೇ ಸನ್ನಿವೇಶಕ್ಕೂ ಕೂಡ ಸದಾ ಸಿದ್ಧವಾಗಿರುವಂತೆ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ರೈಲ್ವೆ ಕಾರ್ಯೋನ್ಮುಖವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.