ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜನ್ ಔಷಧಿ ದಿವಸ್ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಏಳು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರಗಳೊಂದಿಗೆ ಸಂವಹನ ನಡೆಸಲಿದ್ದಾರೆ.
ಯೋಜನೆಯ ಸಾಧನೆಗಳನ್ನು ಆಚರಿಸಲು ಮತ್ತು ಯೋಜನೆಗೆ ಮತ್ತಷ್ಟು ಉತ್ತೇಜನನ್ನು ನೀಡುವ ಸಲುವಾಗಿ ಮಾರ್ಚ್ 7 ರಂದು ಭಾರತದಾದ್ಯಂತ ‘ಜನ್ ಔಷಧಿ ದಿವಸ್’ ಎಂದು ಆಚರಿಸಲು ಉದ್ದೇಶಿಸಲಾಗಿದೆ. ಆಯ್ದ ಜನೌಷಧಿ ಅಂಗಡಿ ಮಾಲೀಕರು ಮತ್ತು ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಹನ ನಡೆಸಲಿದ್ದಾರೆ.
ಪ್ರತಿ ಜನೌಷಧಿ ಔಟ್ಲೆಟ್ಗಳು ದೂರದರ್ಶನದ ಮೂಲಕ ಪ್ರಧಾನಮಂತ್ರಿಯ ಸಂದೇಶವನ್ನು ಪ್ರಸಾರ ಮಾಡಲಿವೆ. ಆಯ್ದ ಮಳಿಗೆಗಳಲ್ಲಿ, ಜನೌಷಧಿಗಳ ಬಗ್ಗೆ ವೈದ್ಯರು, ಮಾಧ್ಯಮ ವ್ಯಕ್ತಿಗಳು, ಫಾರ್ಮಸಿಸ್ಟ್ಗಳು ಮತ್ತು ಫಲಾನುಭವಿಗಳೊಂದಿಗೆ ಪ್ಯಾನೆಲ್ ಡಿಸ್ಕಶನ್ ಚರ್ಚೆಯನ್ನು ಆಯೋಜಿಸಲಾಗುತ್ತದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದ ಗೌಡ ಅವರು ಉತ್ತರಪ್ರದೇಶದ ವಾರಣಾಸಿಯಲ್ಲಿನ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಕೇಂದ್ರದಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಶಿಪ್ಪಿಂಗ್ ರಾಜ್ಯ ಖಾತೆ ಸಚಿವ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಲಕ್ಷ್ಮನ್ಭಾಯ್ ಮಾಂಡವಿಯಾ ಅವರು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರದಲ್ಲಿ ಭಾಗವಹಿಸಲಿದ್ದಾರೆ.
700 ಜಿಲ್ಲೆಗಳಲ್ಲಿ ಸುಮಾರು 6200 ಮಳಿಗೆಗಳನ್ನು ಹೊಂದಿರುವ ಜನೌಷಧಿ ಕೇಂದ್ರಗಳನ್ನು ವಿಶ್ವದ ಅತಿದೊಡ್ಡ ಚಿಲ್ಲರೆ ಔಷಧಿ ಸರಪಳಿ ಎಂದು ಪರಿಗಣಿಸಲಾಗಿದೆ. 2019-20ರ ಆರ್ಥಿಕ ವರ್ಷದಲ್ಲಿ ಒಟ್ಟು ಮಾರಾಟವು ರೂ. 390 ಕೋಟಿ ಆಗಿದೆ ಮತ್ತು ಸಾಮಾನ್ಯ ನಾಗರಿಕರ ಒಟ್ಟು 2200 ಕೋಟಿ ರೂಪಾಯಿಗಳನ್ನು ಈ ಯೋಜನೆ ಉಳಿಸಿದೆ. ಈ ಯೋಜನೆಯು ಸುಸ್ಥಿರ ಮತ್ತು ನಿಯಮಿತ ಗಳಿಕೆಯೊಂದಿಗೆ ಸ್ವ-ಉದ್ಯೋಗಕ್ಕೆ ಉತ್ತಮ ಮೂಲವನ್ನು ಸಹ ಒದಗಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.