ವಾಷಿಂಗ್ಟನ್: ಕೊರೋನವೈರಸ್ ವಿರುದ್ಧ ಹೋರಾಡುವ ಸಲುವಾಗಿ ವಿಶ್ವಬ್ಯಾಂಕ್ ಮಂಗಳವಾರ $12 ಬಿಲಿಯನ್ ನೆರವು ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿದೆ. ಕೊರೋನವೈರಸ್ ಬಾಧಿತ ದೇಶಗಳಿಗೆ ಅದರ ವಿರುದ್ಧ ಹೋರಾಡಲು ಸಹಾಯ ಮಾಡುವ ಸಲುವಾಗಿ ಈ ಹಣವನ್ನು ಒದಗಿಸಲಾಗುತ್ತದೆ.
“ವಿವಿಧ ದೇಶಗಳ ಅಗತ್ಯಗಳಿಗೆ ಸ್ಪಂದಿಸುವ ತ್ವರಿತ, ಪರಿಣಾಮಕಾರಿ ಕ್ರಮವನ್ನು ನೀಡುವುದು ಇದರ ಗುರಿಯಾಗಿದೆ” ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
COVID-19 ವೈರಸ್ ಹರಡುವುದನ್ನು ತಡೆಗಟ್ಟುವ ಹೋರಾಟಕ್ಕೆ ಕನಿಷ್ಠ ಸಜ್ಜುಗೊಂಡಿರುವ ಬಡ ದೇಶಗಳ ಮೇಲಿನ ಹೆಚ್ಚುವರಿ ಹೊರೆಗಳನ್ನು ಗುರುತಿಸುವುದು ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಣವನ್ನು ವಿಶ್ವದ ಬಡ ರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡು ವೈದ್ಯಕೀಯ ಉಪಕರಣಗಳು ಅಥವಾ ಆರೋಗ್ಯ ಸೇವೆಗಳಿಗೆ ಬಳಸಲಾಗುತ್ತದೆ, ಪರಿಣತಿ ಮತ್ತು ನೀತಿ ಸಲಹೆಗಳನ್ನು ಪಡೆಯಲು ಕೂಡ ಈ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ವಿಶ್ವಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಡಿಸೆಂಬರ್ನಲ್ಲಿ ಚೀನಾದ ವುಹಾನ್ ನಗರದಲ್ಲಿ ಸ್ಫೋಟಗೊಂಡ ಈ ವೈರಸ್ ವಿಶ್ವದಾದ್ಯಂತ 3,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 90,000 ಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗುಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.