ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 2.83 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳೀಕರಣಕ್ಕಿಂತಲೂ ಮುಂದಿರುವ, ಭಾರತದ ಅತ್ಯಧಿಕ ಮೌಲ್ಯದ ಸಾಲದಾತ 6.64 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಎಚ್ಡಿಎಫ್ಸಿ ಬ್ಯಾಂಕ್ ಫೆಬ್ರವರಿ 18 ರಂದು 25 ವರ್ಷಗಳನ್ನು ಪೂರ್ಣಗೊಳಿಸಿದೆ.
ಈ ಪ್ರಮುಖ ಮೈಲಿಗಲ್ಲಿನ ಹಿನ್ನಲೆಯಲ್ಲಿ, 25 ಲಕ್ಷ ಗಿಡಗಳನ್ನು ನೆಡಲು ಮತ್ತು ಭಾರತದಾದ್ಯಂತ 2,500 ತರಗತಿಗಳ ಡಿಜಿಟಲೀಕರಣವನ್ನು ಕೈಗೊಳ್ಳಲು ಬ್ಯಾಂಕ್ ಮುಂದಾಗಿದೆ. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಆದಿತ್ಯ ಪುರಿ, ಮಧ್ಯ ಮುಂಬೈನ ಪುರಸಭೆಯ ಶಾಲೆಯಲ್ಲಿ ಪೇರಲೆ ಗಿಡವನ್ನು ನೆಡುವ ಮೂಲಕ ಸ್ವತಃ ಉಪಕ್ರಮಕ್ಕೆ ಚಾಲನೆ ನೀಡಿದರು, ಅಲ್ಲಿ ಅವರು ಮೊದಲ ಡಿಜಿಟಲ್ ತರಗತಿಯನ್ನು ಸಹ ಪ್ರಾರಂಭಿಸಿದರು.
ಉಪಕ್ರಮಗಳನ್ನು ಪ್ರಾರಂಭಿಸಿದ ಬಳಿಕ ಮಾತನಾಡಿದ ಪುರಿ, “ಸ್ವಚ್ಛ ಪರಿಸರ ಮತ್ತು ಸ್ಮಾರ್ಟ್ ತರಗತಿಗಳಿಗೆ ಯಾವುದೇ ಪರ್ಯಾಯಗಳಿಲ್ಲ. ಇವೆರಡೂ ನಮ್ಮ ರಾಷ್ಟ್ರವು ಜಾಗತಿಕ ಶಕ್ತಿಯಾಗಲು ಒಂದು ಸಂಪೂರ್ಣ ಅವಶ್ಯಕತೆಯಾಗಿದೆ” ಎಂದರು.
ಪುರಿ ಅವರು ಈ ವರ್ಷದ ಅಕ್ಟೋಬರ್ನಲ್ಲಿ ನಿವೃತ್ತಿ ಹೊಂದಲಿದ್ದಾರೆ. ನಿವೃತ್ತಿಯಾದ ನಂತರ ಬ್ಯಾಂಕನ್ನು ಮುನ್ನಡೆಸಲು ಸರಿಯಾದ ನಾಯಕತ್ವವನ್ನು ಹೊಂದುವ ಸಲುವಾಗಿ ಅವರು ಈಗಾಗಲೇ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.