ಮಾಸ್ಕೋ: ಸುಮಾರು 40 ವರ್ಷಗಳ ಹಿಂದೆ 1975ರಲ ಜುಲೈ 17ರಂದು ಜಗತ್ತಿನ ಎರಡು ಘಟಾನುಘಟಿ ರಾಷ್ಟ್ರಗಳಾದ ಅಮೇರಿಕದ ಬ್ರಿಗೇಡಿಯರ್ ಜನರಲ್ ಥಾಮಸ್ ಸ್ಟೆಫರ್ಡ್ ಹಾಗೂ ರಷ್ಯಾದ ಅಲೆಕ್ಸಿ ಲಿಯೋನೊವ್ ಬಾಹ್ಯಾಕಾಶದಲ್ಲಿ ಭೇಟಿಯಾಗಿ ಕೈ ಕುಲುಕಿದ್ದರು. ಪಶ್ಚಿಮ ಜರ್ಮನಿಯ ಬಾಹ್ಯಾಕಾಶದಲ್ಲಿ ನಡೆದ ಈ ಹಸ್ತಲಾಘವ ಜಗತ್ತಿನ ಎರಡು ಸೂಪರ್ ಪವರ್ ರಾಷ್ಟ್ರಗಳನ್ನು ಹತ್ತಿರಕ್ಕೆ ತಂದಿತ್ತು, ಇದರ ಅಸಾಧಾರಣ ವಿಷಯವೆಂದರೆ ಇದು ಸುದೀರ್ಘ ಕಾಲ ನಡೆಯುತ್ತಿದ್ದ ಶೀತಲ ಸಮರದ ಆತಂಕಗಳು ಕರಗಿ ನೀರಾಗುವ ಸಂಕೇತವಾಗಿತ್ತು.
ಬಾಹ್ಯಾಕಾಶವನ್ನೇ ವೇದಿಕೆಯಾಗಿಸಿ ಈ ರಾಷ್ಟ್ರಗಳು ಎರಡನೇ ವಿಶ್ವ ಸಮರದ ಹಿನ್ನೆಲೆಯಲ್ಲಿ ತಮ್ಮ ಶ್ರೇಷ್ಠತೆಯನ್ನು ಸ್ಪರ್ಧಿಸಲು ಪೈಪೋಟಿ ನಡೆಸಿದ್ದವು. ಇದನ್ನು ಸ್ಪೇಸ್ ರೇಸ್ ಎಂದು ಕರೆಯಲಾಗಿತ್ತು. ಕೃತಕ ಉಪಗ್ರಹ ’ಸ್ಪುಟ್ನಿಕ್’ ಕಕ್ಷೆಗೆ ಕಳುಹಿಸುವಲ್ಲಿ ಲಿಯೋನೊವ್ ಮುಖ್ಯ ಪಾತ್ರ ವಹಿಸಿದ್ದರು. ವಿಶ್ವದ ಮೊದಲ ಕಾರ್ಯ ಅಮೇರಿಕಾಗೆ ಅತೀವ ಆತಂಕಗಳ ಸಂಕೇತವಾಗಿಯಿತು. ಇದು ರಷ್ಯಾ ದೂರಗಾಮಿ ಪರಮಾಣು ಕ್ಷಿಪಣಿ ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದು ಸೂಚಿಸಿತ್ತು.
ಆದರೆ ನಾಲ್ಕು ವರ್ಷ ನಂತರ ಅಮೇರಿಕದ ನೀಲ್ ಆರ್ಮ್ಸ್ಟ್ರಾಂಗ್ ಹಾಗೂ ಬಝ್ ಆಲ್ಡ್ರಿನ್ ಚಂದ್ರನ ಮೇಲೆ ಇಳಿದರು. ಇದು ಅಮೇರಿಕದ ಸಾಧನೆಗೆ ಕಾರಣವಾಯಿತು.
ವಿಯೆಟ್ನಾಮ್ ಯುದ್ಧದ ಬಳಿಕ ಈ ಎರಡು ರಾಷ್ಟ್ರಗಳು ಅಪ್ಪೋಲೊ- ಸೊಯುಜ್ ಪ್ರಾಜೆಕ್ಟ್ ಎಂಬ ಜಂಟಿ ಮಿಷನ್ ಆರಂಭಿಸಿದರು. ರಷ್ಯಾವು ಕ್ರೀಮಿಯವನ್ನು ವಿಲೀನಗೊಳಿಸುವುದರ ಮೂಲಕ ಬಿಕ್ಕಟ್ಟುಗಳು ಮೂಡಿ ಬಂದರೂ, ಸ್ನೇಹ- ಸಹಕಾರದೊಂದಿಗೆ ಸಂಬಂಧಗಳು ಮುಂದುವರೆದಿವೆ.
ಇವರಿಬ್ಬರ ಸ್ನೇಹ- ಬಾಂಧವ್ಯ ಮುಂದುವರೆದಿದ್ದು, ಅಪ್ಪೋಲೊ- ಸೊಯುಜ್ ಟೆಸ್ಟ್ ಪ್ರಾಜೆಕ್ಟ್ನ ಬಿಡುಗಡೆಯ 40ನೇ ವಾರ್ಷಿಕೋತ್ಸವವನ್ನು ಪರಸ್ಪರ ಭೇಟಿಯಾಗುವ ಮೂಲಕ ಮಾಸ್ಕೋ ಸ್ಪೇಸ್ ಮ್ಯೂಸಿಯಂನಲ್ಲಿ ಆಚರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.