ನವದೆಹಲಿ: ದೇಶದಲ್ಲಿನ ಮಹಿಳಾ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಫೇಸ್ಬುಕ್ ಸಹಯೋಗದೊಂದಿಗೆ ವಿಭಿನ್ನ ಅಭಿಯಾನವೊಂದನ್ನು ಆರಂಭಿಸಿದೆ.
ತಮ್ಮ ಸಮುದಾಯಗಳಲ್ಲಿ ಬದಲಾವಣೆಗಳನ್ನು ತಂದ, ಇತರರ ಏಳಿಗೆಗಾಗಿ ಶ್ರಮಿಸಿದ ಮಹಿಳೆಯರನ್ನು ಗೌರವಿಸುವುದು ಈ ಯೋಜನೆಯ ಉದ್ದೇಶ.
‘#100 ವುಮನ್ ಇನಿಶೀಯೇಟಿವ್’ಗೆ ಚಾಲನೆ ನೀಡಲಾಗಿದ್ದು, ಸೋಶಲ್ ಮೀಡಿಯಾದ ಮೂಲಕ ಸಾರ್ವಜನಿಕ ನಾಮನಿರ್ದೇಶನದೊಂದಿಗೆ ದೇಶದ 100 ಮಹಿಳಾ ಸಾಧಕರನ್ನು ಆಯ್ಕೆ ಮಾಡುವುದು ಇದರ ಮುಖ್ಯ ಉದ್ದೇಶ.
ಬದುಕನ್ನು ಬದಲಾಯಿಸಿದ ಮಹಿಳೆ ಪ್ರತಿಯೊಬ್ಬರ ಜೀವನದಲ್ಲೂ ಇದ್ದಾಳೆ, ಅದೇ ರೀತಿ ಸಮಾಜದ ಪ್ರಗತಿಗೆ ಶ್ರಮಿಸಿದ, ಸಮುದಾಯದ ಬದಲಾವಣೆಗೆ ದುಡಿದ ಮಹಿಳೆಯರಿದ್ದಾರೆ. ಅವರಿಗೆ ಕೇವಲ ಧನ್ಯವಾದ ಹೇಳಿದರಷ್ಟೇ ಸಾಕಾಗದು, ಅವರನ್ನು ಗೌರವಿಸುವುದು ಕೂಡ ಅಗತ್ಯ ಎಂದು ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.
ಅದಕ್ಕಾಗಿ ಮಹಿಳಾ ಮತ್ತು ಕಲ್ಯಾಣ ಸಚಿವಾಲಯದ ಫೇಸ್ಬುಕ್ ಪೇಜ್ಗೆ ಲಾಗ್ ಆಗಿ ಸಾಧಕ ಮಹಿಳೆಯನ್ನು ನಾಮ ನಿರ್ದೇಶನಗೊಳಿಸಿ, ಮತ್ತೆ ಆಕೆಯನ್ನು ಯಾಕೆ ಗೌರವಿಸಲು ಬಯಸುತ್ತೀರಿ ಎಂಬುದನ್ನು ವಿವರಿಸಿ ಎಂದು ಮೇನಕಾ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಾಮನಿರ್ದೇಶನಕ್ಕೆ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ. ನವೆಂಬರ್ 7ರಿಂದ ಮತದಾನ ಆರಂಭವಾಗುತ್ತದೆ.
http://bit.ly/1HsZH6i ಈ ಲಿಂಕ್ ಮುಖಾಂತರ ಲಾಗ್ ಇನ್ ಆಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.