ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ 2019ಕ್ಕೆ ಬೆಂಬಲವನ್ನು ನೀಡುವ ಸಲುವಾಗಿ ಬುಧವಾರ ವಿವಿಧ ಧರ್ಮಗಳ ಆಧ್ಯಾತ್ಮ ನಾಯಕರುಗಳ 7 ಸದಸ್ಯರ ನಿಯೋಗವು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಅವರನ್ನು ಭೇಟಿಯಾಯಿತು. ಈ ಕಾಯ್ದೆ ವಿದೇಶಿಗರ ಬಗ್ಗೆ ಕಾಳಜಿ ಹೊಂದಿದೆಯೇ ಹೊರತು ಭಾರತೀಯರು ಇದರ ಬಗ್ಗೆ ಭಯ ಪಡಬೇಕಾಗಿಲ್ಲ ಎಂಬುದನ್ನು ನಿಯೋಗ ಸಾರಿ ಹೇಳಿತು.
ಈ ನಿಯೋಗದಲ್ಲಿ ಜೈನ ಆಚಾರ್ಯ ಲೋಕೇಶ್, ಧ್ಯಾನ ಗುರು ಸ್ವಾಮಿ ದೀಪಂಕರ್, ಮುಫ್ತಿ ಶಮೂನ್ ಖಾಸ್ಮಿ, ಸರ್ದಾರ್ ಸಂತ ಸಿಂಗ್, ವೀರ್ ಚಕ್ರ ಪ್ರಶಸ್ತಿ ಪುರಸ್ಕೃತ ಕರ್ನಲ್ ಟಿ.ಪಿ.ತ್ಯಾಗಿ, ವಿನೀತ್ ಕುಮಾರ್ ಮತ್ತು ಗೌತಮ್ ಸೇರಿದಂತೆ ವಿವಿಧ ಧರ್ಮ ಮತ್ತು ಪಂಗಡಗಳ ಪ್ರಮುಖ ಆಧ್ಯಾತ್ಮಿಕ ಮುಖಂಡರು ಮತ್ತು ಸಾಮಾಜಿಕ ಸುಧಾರಕರು ಇದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಗಳ ಬಗ್ಗೆ ನಿಯೋಗದ ಸದಸ್ಯರು ಒಗ್ಗಟ್ಟನ್ನು ವ್ಯಕ್ತಪಡಿಸಿದರು. ವಿದೇಶಿಯರ ಬಗ್ಗೆ ಈ ಮಸೂದೆ ಇದೆಯೇ ಹೊರತು, ಯಾವುದೇ ಧರ್ಮ, ಜಾತಿ, ಬಣ್ಣದ ಯಾವುದೇ ಭಾರತೀಯರು ಇದರ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂಬುದನ್ನು ಇವರುಗಳು ಹೇಳಿದ್ದಾರೆ.
“ಧರ್ಮ ಮತ್ತು ಅಹಿಂಸಾ” ತತ್ವಗಳನ್ನು ಎತ್ತಿ ಹಿಡಿದ ನಿಯೋಗವು, ಭಾರತದ ಮೂರು ನೆರೆಯ ರಾಷ್ಟ್ರಗಳಿಂದ ಶೋಷಣೆಗೆ ಒಳಗಾಗಿ ಭಾರತಕ್ಕೆ ವಲಸೆ ಬಂದವರಿಗೆ ಮಾನವೀಯ ಆಧಾರದ ಮೇಲೆ ಈ ಕಾಯ್ದೆಯನ್ನು ಅಂಗೀಕರಿಸಲಾಗಿದೆ ಎಂಬುದನ್ನು ದೃಢಪಡಿಸಿದರು.
“ನಾವೆಲ್ಲರೂ ನಮ್ಮನ್ನು ಎಲ್ಲಕ್ಕಿಂತ ಮೊದಲು ಭಾರತೀಯರೆಂದು ಗುರುತಿಸುತ್ತೇವೆ ಮತ್ತು ಈ ಭಾವ ನಮ್ಮನ್ನು ಒಟ್ಟಿಗೆ ಇರಿಸುತ್ತದೆ ಮತ್ತು ಪರಸ್ಪರ ಗೌರವ ಮತ್ತು ಸ್ವೀಕಾರದ ಗುಣವನ್ನು ವೃದ್ಧಿಸುತ್ತದೆ. ನಮ್ಮ ಅಡಿಪಾಯವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ತಪ್ಪು ಮಾಹಿತಿ ರವಾನಿಸುತ್ತಿರುವ ಜನರಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕೆಂದು ಜನರನ್ನು ಒತ್ತಾಯಿಸುತ್ತೇವೆ” ಎಂಬುದನ್ನು ಇವರು ಪುನರುಚ್ಚರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.