ನವದೆಹಲಿ: ಲೋಕಸಭಾ ಸಂಸದರ ಕಾರ್ಯದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಸಂಸತ್ತಿನಲ್ಲಿ ಕಾಲ್ ಸೆಂಟರ್ ಅನ್ನು ತೆರೆಯಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನೇತೃತ್ವದಲ್ಲಿ ವಿಶೇಷ ಕಾಲ್ ಸೆಂಟರ್ ಅನ್ನು ತೆರೆಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓಂ ಬಿರ್ಲಾ ಅವರು, “ವಿಶೇಷ ಕಾಲ್ ಸೆಂಟರುಗಳಿಂದಾಗಿ ಸಂಸದರು ತಮ್ಮ ಕ್ಷೇತ್ರಗಳ ನಿರ್ವಹಣೆಯೊಂದಿಗೆ ಸಂಸದೀಯ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಲಿದ್ದಾರೆ, ಇದರಿಂದ ಅವರ ದಕ್ಷತೆ ಸುಧಾರಣೆಯಾಗಲಿದೆ” ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ದಿನದ 24 ಗಂಟೆಯೂ 365 ದಿನಗಳ ಕಾಲವೂ ಈ ಕಾಲ್ ಸೆಂಟರುಗಳು ಕಾರ್ಯನಿರ್ವಹಣೆ ಮಾಡಲಿವೆ. ಈ ಕಾಲ್ ಸೆಂಟರಿಗೆ ಮಾಹಿತಿ ಮತ್ತು ಸಂವಹನ ಕೇಂದ್ರ ಎಂದು ಹೆಸರಿಸಲಾಗಿದೆ. ಪ್ರತಿವಿಷಯದಲ್ಲೂ ಈ ಕೇಂದ್ರ ಸಂಸದರಿಗೆ ನೆರವಾಗಲಿದೆ. ಆಡಳಿತಾತ್ಮಕ ವಿಷಯ, ಬಾಕಿ ಇರುವ ಪ್ರಯಾಣ ಬಿಲ್ಗಳ ಸ್ಥಿತಿಯನ್ನು ತಿಳಿಯುವಿಕೆ, ಕ್ರಿಯಾತ್ಮಕತೆ, ಪ್ರಮುಖ ವಿಷಯಗಳ ಕುರಿತು ಹಿನ್ನೆಲೆ ಸಂಶೋಧನೆಗಳನ್ನು ಒದಗಿಸಲಿದೆ.
ಕಾಲ್ ಸೆಂಟರ್ ಅನ್ನು ಕಳೆದ ತಿಂಗಳು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಅದಕ್ಕಾಗಿ ಪಾರ್ಲಿಮೆಂಟ್ ಹೌಸ್ ಅನೆಕ್ಸ್ನಲ್ಲಿ ಕೊಠಡಿಯೊಂದನ್ನು ನಿಗದಿಪಡಿಸಲಾಗಿದೆ. ಇದಕ್ಕಾಗಿ ಮೂವರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಲೋಕಸಭಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಶೋಧನಾ ಸಹಾಯ ಸೇರಿದಂತೆ ಸಂಸದರಿಗೆ ಉತ್ತಮ ಸೌಲಭ್ಯಗಳನ್ನು ನೀಡುವಂತೆ ಸ್ಪೀಕರ್ ಓಂ ಬಿರ್ಲಾ ಕರೆ ನೀಡಿದ ನಂತರ ಕಾಲ್ ಸೆಂಟರ್ ಅನ್ನು ಸ್ಥಾಪನೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.