ಹೈದರಾಬಾದ್: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಎಲ್ಲಾ 130 ಕೋಟಿ ಭಾರತೀಯರು ತಮ್ಮ ಪ್ರದೇಶ, ಧರ್ಮ ಮತ್ತು ಸಂಸ್ಕೃತಿಯ ತಾರತಮ್ಯವಿಲ್ಲದೆ ಹಿಂದೂ ಸಮಾಜದ ಭಾಗವಾಗಿದ್ದಾರೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ 130 ಕೋಟಿ ಭಾರತೀಯರನ್ನು ಸಂಘ ಹಿಂದೂ ಸಮಾಜ ಎಂದು ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಮನೋಭಾವ ಹೊಂದಿರುವವರು, ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವವರೆಲ್ಲರೂ ಹಿಂದೂ ಸಮಾಜದ ಭಾಗವಾಗಿದ್ದಾರೆ ಎಂದು ಆರ್ಎಸ್ಎಸ್ ಮುಖ್ಯಸ್ಥರು ಹೇಳಿದ್ದಾರೆ.
“ನಾನು ಹಿಂದೂ ಸಮಾಜ ಎಂದು ಹೇಳಿದಾಗ, ಭಾರತವನ್ನು ತಮ್ಮ ತಾಯಿನಾಡು ಎಂದು ಪರಿಗಣಿಸುವವರು, ಅದರ ಜಲ, ಕಾಡು ಮತ್ತು ಪ್ರಾಣಗಳನ್ನು ಪ್ರೀತಿಸುವವರು, ರಾಷ್ಟ್ರೀಯ ಮನೋಭಾವವನ್ನು ಹೊಂದಿರುವವರು ಮತ್ತು ಅದರ ಸಂಸ್ಕೃತಿಯನ್ನು ಗೌರವಿಸುವವರು ಸೇರುತ್ತಾರೆ. ಅವರು ಮಾತನಾಡುವ ಭಾಷೆಗಳು, ಅವರು ಇರುವ ಪ್ರದೇಶಗಳು, ಅವರ ಪೂಜಾ ಕ್ರಮಗಳ ತಾರತಮ್ಯವಿಲ್ಲದೆ, ಅವರು ಯಾವುದೇ ಧರ್ಮವನ್ನು ಅನುಸರಿಸದಿದ್ದರೂ ಸಹ ಎಲ್ಲರೂ ಭಾರತದ ಮಕ್ಕಳು “ಎಂದು ಅವರು ಹೇಳಿದ್ದಾರೆ.
ಸಂಘ ಎಲ್ಲರನ್ನೂ ಒಟ್ಟುಗೂಡಿಸಲು ಬಯಸುತ್ತದೆ. ಸಂಘಟದ ನಿಲುವು ಏನು ಎಂಬುದನ್ನು ತಿಳಿಸಲು ಮನೆ ಮನೆಗೆ ತೆರಳಬೇಕು ಎಂದು ಭಾಗವತ್ ಸ್ವಯಂಸೇವಕರಿಗೆ ಕರೆ ನೀಡಿದ್ದಾರೆ.
‘ಧರ್ಮ ವಿಜಯ’ ಎಂಬುದು ಸಂಘ, ಹಿಂದೂ ಸಮಾಜ ಮತ್ತು ಭಾರತದ ಸಿದ್ದಾಂತ. ಈ ದೇಶ ಸಾಂಪ್ರದಾಯಿಕವಾಗಿ ಹಿಂದುತ್ವ ವಾದಿ ಎಂದಿದ್ದಾರೆ.
ಆರ್ಎಸ್ಎಸ್ ಸ್ವಯಂಸೇವಕರು ತಮ್ಮ ಶಾಖೆಗಳಲ್ಲಿ ‘ಧರ್ಮ ವಿಜಯ್’ಗಾಗಿ ಪ್ರತಿದಿನ ಒಂದು ಗಂಟೆ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. “ಇದು ಸಂಘದಷ್ಟೇ ಅಲ್ಲ, ಎಲ್ಲ ಭಾರತೀಯರ ಆಲೋಚನೆಯಾಗಿದೆ. ಅವರು ಇದನ್ನು ಆನುವಂಶಿಕವಾಗಿ ಪಡೆದಿದ್ದಾರೆ” ಎಂದಿದ್ದಾರೆ.
”ಧರ್ಮ ವಿಜಯಕ್ಕಾಗಿ ಕೆಲಸ ಮಾಡುವವರು ಇತರರ ಕಷ್ಟಗಳನ್ನು ತೆಗೆದು ನಿರ್ಮೂಲನೆ ಮಾಡಿ ಸಮಾಜ ಮತ್ತು ದೇಶದ ಸುಧಾರಣೆಗಾಗಿ ಕೆಲಸ ಮಾಡುವ ನಿಸ್ವಾರ್ಥ ಜನರು” ಎಂದು ಭಗವತ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.