News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ದಾಖಲೆಯ 9 ದಿನಗಳಲ್ಲಿ ತೀರ್ಪು ಪ್ರಕಟಿಸಿ, ಅಪ್ರಾಪ್ತೆಯ ಅತ್ಯಾಚಾರಿಗೆ ಶಿಕ್ಷೆ ವಿಧಿಸಿದೆ ಯುಪಿ ನ್ಯಾಯಾಲಯ

ಮಹೋಬ: ಉತ್ತರಪ್ರದೇಶದ ಮಹೋಬ ಜಿಲ್ಲೆಯ ನ್ಯಾಯಾಲಯವು ಅತ್ಯಾಚಾರ ಪ್ರಕರಣವೊಂದರ ವಿಚಾರಣೆಯನ್ನು ಒಂಬತ್ತು ದಿನಗಳೊಳಗೆ ಮುಕ್ತಾಯಗೊಳಿಸಿ ತೀರ್ಪು ಪ್ರಕಟಿಸಿದೆ. ಈ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಅತ್ಯಾಚಾರಿಗೆ 20 ವರ್ಷಗಳ ಸಜೆ ಮತ್ತು 50,000 ರೂಪಾಯಿಗಳ ದಂಡವನ್ನು ವಿಧಿಸಿದೆ.

ಪೊಲೀಸರ ಪ್ರಕಾರ, 2019ರ ಅಕ್ಟೋಬರ್ 5ರಂದು ಕಿಶೋರಿ ಎಂಬ ಅಪ್ರಾಪ್ತ ಬಾಲಕಿಯ ಯುವಕನೋರ್ವನ ಮೇಲೆ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಳು. ಯುವಕ ತನ್ನನ್ನು ಅಪಹರಿಸಿ ಅತ್ಯಾಚಾರಕ್ಕೀಡು ಮಾಡಿದ್ದಾನೆ, ಅಲ್ಲದೇ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 6ರಂದು ಪೊಲೀಸರು ಯುವಕನ ವಿರುದ್ಧ ಪೋಸ್ಕೋ ಕಾಯ್ದೆಯ ಸೆಕ್ಷನ್ 363, 366, 376 ಮತ್ತು 323ರ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದರು.

ನವೆಂಬರ್ 13ರಂದು ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು, ನವೆಂಬರ್ 14ರಂದು ನ್ಯಾಯಾಲಯ ವಿಚಾರಣೆಯನ್ನು ಪ್ರಾರಂಭಿಸಿತ್ತು. ನವೆಂಬರ್ 18 ರವರೆಗೂ ವಿಚಾರಣೆ ಮುಂದುವರೆದಿತ್ತು. ಈ ಸಂದರ್ಭದಲ್ಲಿ ಎರಡೂ ಕಡೆಯ ವಾದವಿವಾದಗಳನ್ನು ನ್ಯಾಯಾಲಯವು ಆಲಿಸಿತ್ತು.

ನವೆಂಬರ್ 22 ರಂದು ತೀರ್ಪು ಪ್ರಕಟಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಮಕೃಷ್ಣ ಶುಕ್ಲಾ ಅವರು, ಆರೋಪಿ ಕರಣ್ ಅಹಿರ್ಬರ್ ತಪ್ಪಿತಸ್ಥ ಎಂದು ಘೋಷಿಸಿದ್ದರು. ಇದರಂತೆ ಆತನಿಗೆ 20 ವರ್ಷಗಳ ಸೆರೆವಾಸ ಮತ್ತು 50000 ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ.

ಇದೇ ಮೊದಲ ಬಾರಿಗೆ ನ್ಯಾಯಾಲಯವೊಂದು ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಒಂಬತ್ತು ದಿನಗಳಲ್ಲಿ ವಿಚಾರಣೆಯನ್ನು ಮುಗಿಸಿ ತೀರ್ಪನ್ನು ಪ್ರಕಟಿಸಿರುವುದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top