ನವದೆಹಲಿ: ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ, ಕಲ್ಲು ತೂರಾಟ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ 190 ಪ್ರಕರಣಗಳು ವರದಿಯಾಗಿದ್ದು, 765 ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಇಂದು ಮಾಹಿತಿಯನ್ನು ಬಿಡುಗಡೆ ಮಾಡಿದೆ. 2019 ರ ಜನವರಿ 1 ರಿಂದ ಆಗಸ್ಟ್ 4 ರವರೆಗೆ ಇಂತಹ 361 ಪ್ರಕರಣಗಳು ದಾಖಲಾಗಿವೆ.
“ಕಲ್ಲು ತೂರಾಟದಂತಹ ಕ್ರಮಗಳನ್ನು ಹತ್ತಿಕ್ಕಲು ಸರ್ಕಾರವು ಕಟ್ಟುನಿಟ್ಟಿನ ನೀತಿಗಳನ್ನು ಅನುಷ್ಠಾನಗೊಳಿಸಿದೆ. ತೊಂದರೆ ಕೊಡುವವರನ್ನು, ಪ್ರಚೋದಕರನ್ನು ಗುರುತಿಸಲಾಗಿದೆ ಮತ್ತು ಅವರ ವಿರುದ್ಧ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. 765 ಜನರನ್ನು ಬಂಧಿಸಲಾಗಿದ್ದು, ಇದರಲ್ಲಿ ಪಿಎಸ್ಎ ಅಡಿಯಲ್ಲಿ ಮತ್ತು ಮುಂಜಾಗೃತ ಕ್ರಮವಾಗಿ ಬಂಧನಗಳು ಕೂಡ ಸೇರಿವೆ ಎಂದಿದೆ.
ಕಾಶ್ಮೀರ ಕಣಿವೆಯಲ್ಲಿನ ಕಲ್ಲು ತೂರಾಟದ ಘಟನೆಗಳ ಹಿಂದೆ ಹುರಿಯತ್ ಪ್ರತ್ಯೇಕತಾವಾದಿ ಸಂಘಟನೆ ಮತ್ತು ಕಾರ್ಯಕರ್ತರು ಇದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಭಯೋತ್ಪಾದಕ ಧನಸಹಾಯ ಪ್ರಕರಣಗಳಲ್ಲಿ ಎನ್ಐಎ ಈವರೆಗೆ 18 ಮಂದಿಯನ್ನು ಬಂಧಿಸಿ ಚಾರ್ಜ್ಶೀಟ್ ಸಲ್ಲಿಸಿದೆ.
ಜಮ್ಮು-ಕಾಶ್ಮೀರದ ಗಡಿಯುದ್ದಕ್ಕೂ 950 ಕದನ ವಿರಾಮ ಉಲ್ಲಂಘನೆಯ ಘಟನೆಗಳು 2019 ರ ಆಗಸ್ಟ್ ತಿಂಗಳಿನಿಂದ 2019 ರ ಅಕ್ಟೋಬರ್ವರೆಗೆ ವರದಿಯಾಗಿದೆ ಎಂದು ಸರ್ಕಾರ ಹೇಳಿದೆ.
ಪ್ರಸ್ತುತ ಕಾಶ್ಮೀರದ ಶಾಲೆಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ 99.7% ರಷ್ಟಿದೆ ಎಂದು ಸರ್ಕಾರ ಹೇಳಿದೆ.
ಕಳೆದ 6 ತಿಂಗಳಲ್ಲಿ 12,934 ವಿದೇಶಿ ಪ್ರವಾಸಿಗರು ಸೇರಿದಂತೆ ಒಟ್ಟು 3,410,219 ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ ಮತ್ತು ಪ್ರವಾಸೋದ್ಯಮದ ಮೂಲಕ 25.12 ಕೋಟಿ ರೂ. ಆರು ತಿಂಗಳ ಅವಧಿಯಲ್ಲಿ ಗಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.