ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ಥಾನಗಳ ನಡುವೆ ಎಷ್ಟೇ ಶತ್ರುತ್ವ ಇದ್ದರೂ ಕೆಲವೊಂದು ಮಾನವೀಯ ಮೌಲ್ಯಗಳು ಎರಡು ದೇಶಗಳ ನಡುವೆ ಅಪೂರ್ವ ಅನುಭೂತಿಯನ್ನು ಸೃಷ್ಟಿಸುತ್ತದೆ. ಭಾರತೀಯರ ಪ್ರೀತಿ ಮತ್ತು ಕಾಳಜಿಯನ್ನು ಕಂಡು ಪಾಕಿಸ್ಥಾನಿ ತಂದೆಯೊಬ್ಬ ಭಾರತಕ್ಕೆ ಬರೆದ ಧನ್ಯವಾದ ಪತ್ರವೇ ಇದಕ್ಕೆ ಸಾಕ್ಷಿ.
ಪಾಕಿಸ್ಥಾನದ ಚಕ್ವಾಲದ ನಿವಾಸಿ ಅಬೀಹಾ ಸಣ್ಣ ವಯಸ್ಸಿನಲ್ಲೇ ಲಿವರ್ ಸಮಸ್ಯೆಗೆ ತುತ್ತಾದವಳು, ಸೌದಿ ಅರೇಬಿಯಾದಲ್ಲಿ ಒಂದು ಬಾರಿ ಲಿವರ್ ಟ್ರಾನ್ಸ್ಪ್ಲಾಂಟ್ಗೆ ಒಳಗಾದರೂ ಮತ್ತೊಂದು ಟ್ರಾನ್ಸ್ಪ್ಲಾಂಟ್ಗೆ ಒಳಗಾಗ ಬೇಕಾದ ಅನಿವಾರ್ಯತೆ ಎದುರಾಗಿತ್ತು.
ಪಾಕಿಸ್ಥಾನದಲ್ಲಿ ಇದಕ್ಕೆ 5 ಮಿಲಿಯನ್ ವ್ಯಯವಾಗಲಿದೆ ಎಂದು ತಿಳಿದ ಅಬೀಹಾ ತಂದೆ ಹಮೀದ್ ಇಮ್ರಾನ್ ಮಗಳನ್ನು ಕರೆದುಕೊಂಡು ನೇರ ದೆಹಲಿಯ ಅಪೋಲೋ ಆಸ್ಪತ್ರೆಗೆ ಕರೆ ತಂದರು. ಆಸ್ಪತ್ರೆಯವರು ತನ್ನ ಮಗುವಿಗೆ, ತನ್ನ ಕುಟುಂಬಕ್ಕೆ ತೋರಿಸಿದ ಪ್ರೀತಿ, ಔದಾರ್ಯ ಹಮೀದ್ ಅವರ ಹೃದಯವನ್ನು ತಟ್ಟಿತ್ತು.
ಚಿಕಿತ್ಸೆ ಫಲಕಾರಿಯಾಗದ ಅಬೀಹಾ ಮೇ 7, 2015ರಲ್ಲಿ ಮೃತಳಾಗಿದ್ದಾಳೆ, ಆದರೆ ಭಾರತ ಮತ್ತು ವೈದ್ಯರು ತೋರಿಸಿದ ಪ್ರೀತಿಯನ್ನು ಆಕೆಯ ಕುಟುಂಬ ಮರೆತಿಲ್ಲ. ಅದಕ್ಕಾಗಿ ಆಕೆಯ ತಂದೆ ಪಾಕಿಸಾಸ್ಥಾನದ ಪ್ರತಿಷ್ಟಿತ ಪತ್ರಿಕೆ ಡಾನ್ನಲ್ಲಿ, ಭಾರತ, ಇಲ್ಲಿನ ವೈದ್ಯರು ಮತ್ತು ಸೇನೆಗೆ ಧನ್ಯವಾದವನ್ನು ತಿಳಿಸಿ ಲೇಖನವನ್ನು ಪ್ರಕಟಿಸಿದ್ದಾರೆ.
ಭಾರತದಲ್ಲಿ ಇದ್ದಷ್ಟು ದಿನ ನಾವು ವಿದೇಶಿ ನೆಲದಲ್ಲಿದ್ದೇವೆ ಎಂಬ ಭಾವನೆ ಬರಲಿಲ್ಲ, ಅಲ್ಲಿನ ವೈದ್ಯರು, ಸಿಬ್ಬಂದಿಗಳು, ಜನರು ಎಷ್ಟೊಂದು ಪ್ರೀತಿಯಿಂದ ನಮ್ಮನ್ನು ನೋಡಿಕೊಂಡರು. ನನ್ನ ಪುತ್ರಿಯ ಮೃತದೇಹ ಹೊತ್ತ ಅಂಬ್ಯುಲೆನ್ಸ್ ಗಡಿಯಲ್ಲಿ ಬಂದು ನಿಲ್ಲುತ್ತಿದ್ದಂತೆ ಓಡಿ ಬಂದ ಭಾರತೀಯ ಸೈನಿಕರು ಅದರ ಮೇಲೆ ಹಸಿರು ಬಟ್ಟೆಯನ್ನು ಹೊದಿಸಿದರು.
ನನ್ನ ಪುತ್ರಿ ಭಾರತವನ್ನು ಅತೀವವಾಗಿ ಪ್ರೀತಿಸಿದ್ದಳು, ದೊಡ್ಡವಳಾದ ಬಳಿಕ ವೈದ್ಯೆಯಾಗಿ ಅಪೋಲೋ ಆಸ್ಪತ್ರೆಯಲ್ಲೇ ಕಾರ್ಯ ಮಾಡುತ್ತೇನೆ ಎನ್ನುತ್ತಿದ್ದಳು. ಪ್ರೀತಿ ತೋರಿದ ಭಾರತಕ್ಕೆ, ಅಲ್ಲಿನ ವೈದ್ಯರಿಗೆ, ಸೈನಿಕರಿಗೆ ಧನ್ಯವಾದಗಳು ಎಂದು ಹಮೀದ್ ಬರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.