ನವದೆಹಲಿ: ವಿದೇಶಿ ಕಾರ್ಯಾಚರಣೆಗೆ ನಿಯೋಜಿಸಲಾಗಿರುವ ಭಾರತೀಯ ಸೇನೆಯ ಮೊದಲ ಮಹಿಳಾ ಜಡ್ಜ್ ಅಡ್ವೊಕೇಟ್ ಜನರಲ್ ಆಫೀಸರ್ ಆಗಿ ಲೆಫ್ಟಿನೆಂಟ್ ಕರ್ನಲ್ ಜ್ಯೋತಿ ಶರ್ಮಾ ಅವರನ್ನು ನೇಮಿಸಲಾಗಿದೆ.
ಜ್ಯೋತಿ ಶರ್ಮಾ ಅವರು, ಸೀಶೆಲ್ಸ್ ಸರ್ಕಾರದೊಂದಿಗೆ ಮಿಲಿಟರಿ ಕಾನೂನು ತಜ್ಞರಾಗಿ ನೇಮಕಗೊಳ್ಳಲಿದ್ದಾರೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆಯ ಪ್ರಕಾರ, ಸೀಶೆಲ್ಸ್ ಸರ್ಕಾರದೊಂದಿಗೆ ಮಿಲಿಟರಿ ಕಾನೂನು ತಜ್ಞರಾಗಿ ಅವರು ನೇಮಕಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಮತ್ತು ಮಿಲಿಟರಿ ಕಾಯ್ದೆಯ ಬಗ್ಗೆ ಸೀಶೆಲ್ಸ್ ಸರ್ಕಾರದ ಅಧಿಕಾರಿಗಳಿಗೆ ಅಪ್ಡೇಟ್ ಮಾಡುವುದು ಲೆಫ್ಟಿನೆಂಟ್ ಕರ್ನಲ್ ಜ್ಯೋತಿಯ ಮುಖ್ಯ ಪಾತ್ರವಾಗಿದೆ.
ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ, ವಿಂಗ್ ಕಮಾಂಡರ್ ಅಂಜಲಿ ಸಿಂಗ್ ಅವರು ರಷ್ಯಾದ ಭಾರತೀಯ ರಾಯಭಾರ ಕಛೇರಿಗೆ ಭಾರತದ ಮೊದಲ ಮಿಲಿಟರಿ ರಾಜತಾಂತ್ರಿಕರಾಗಿ ವಿದೇಶಿ ಕಾರ್ಯಾಚರಣೆಗಾಗಿ ನಿಯೋಜನೆಗೊಂಡರು. ಡೆಪ್ಯೂಟಿ ಏರ್ ಅಟಾಚೆಯಾಗಿ ಹೊಸ ಯೋಜನೆಗೆ ಅವರು ಸೇರಿಕೊಂಡರು.
ಅದಕ್ಕೂ ಮೊದಲು, ವಿಂಗ್ ಕಮಾಂಡರ್ ಎಸ್.ಧಾಮಿ ಅವರು ಫ್ಲೈಯಿಂಗ್ ಯುನಿಟ್ನ ಮೊದಲ ಮಹಿಳಾ ಫ್ಲೈಟ್ ಕಮಾಂಡರ್ ಆದರು.
ಸೇನೆಯು ಮಿಲಿಟರಿ ಪೊಲೀಸ್ ಕಾರ್ಪ್ಸ್ಗೆ ಮಹಿಳೆಯರನ್ನೂ ನಿಯೋಜನೆಗೊಳಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಒಟ್ಟಿನಲ್ಲಿ ಸೇನೆಯಲ್ಲಿ ಮಹಿಳೆಯರಿಗೂ ಸಮಾನ ಪ್ರಾತಿನಿಧ್ಯಗಳು ಸಿಗುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.