ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ನವೆಂಬರ್ 24 ರಂದು ಪ್ರಸಾರಗೊಳ್ಳಲಿದೆ. ಇದು ಅವರ ಜನಪ್ರಿಯ ಕಾರ್ಯಕ್ರಮದ 59ನೇ ಆವೃತ್ತಿಯಾಗಿದೆ. ಇದಕ್ಕಾಗಿ ಸಲಹೆ ಸೂಚನೆಗಳನ್ನು ನೀಡುವಂತೆ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಟ್ವಿಟ್ ಮಾಡಿರುವ ಮೋದಿ,”ಈ ತಿಂಗಳ ಮನ್ ಕೀ ಬಾತ್ ಅನ್ನು ಎದುರು ನೋಡುತ್ತಿದ್ದೇನೆ, ದಿನಾಂಕ 24 ರಂದು ಪ್ರಸಾರಗೊಳ್ಳಲಿದೆ. ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಲು 1800-11-7800ಗೆ ಡಯಲ್ ಮಾಡಿ. ಪರ್ಯಾಯವಾಗಿ, ನಿಮ್ಮ ಸಲಹೆ ಸೂಚನೆಗಳನ್ನು MyGov ಮತ್ತು ನಮೋ ಅಪ್ಲಿಕೇಶನ್ನಲ್ಲಿ ಹಂಚಿಕೊಳ್ಳಬಹುದು” ಎಂದಿದ್ದಾರೆ.
ಅಕ್ಟೋಬರ್ 27 ರಂದು ಪ್ರಸಾರಗೊಂಡಿದ್ದ ತಮ್ಮ ‘ಮನ್ ಕೀ ಬಾತ್’ ಕಾರ್ಯಕ್ರಮದದಲ್ಲಿ ಪ್ರಧಾನಿ ಮೋದಿಯವರು ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ, ಹಬ್ಬದ ಪ್ರವಾಸೋದ್ಯಮದ ಕಲ್ಪನೆ ಮುಂತಾದ ವಿವಿಧ ವಿಷಯಗಳ ಕುರಿತು ಮಾತನಾಡಿದ್ದರು.
2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಅವರು ಪ್ರತಿ ತಿಂಗಳು ‘ಮನ್ ಕೀ ಬಾತ್’ ಕಾರ್ಯಕ್ರಮದ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು, ಅನಿಸಿಕೆಗಳನ್ನು ದೇಶದ ಜನರೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.