ನವದೆಹಲಿ: ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್ಟಿ ಮೊತ್ತ ರೂ.95,380 ಕೋಟಿ. ಹಣಕಾಸು ಸಚಿವಾಲಯ ಶುಕ್ರವಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹವು ಕುಸಿತ ಕಂಡಿದೆ. ಅಕ್ಟೋಬರ್ 2018ರಲ್ಲಿ ಜಿಎಸ್ಟಿ ಆದಾಯ ಸಂಗ್ರಹವು 1,00,710 ಕೋಟಿ ರೂಪಾಯಿ ಆಗಿತ್ತು. ವಿಶೇಷವೆಂದರೆ, ಜಿಎಸ್ಟಿ ಸಂಗ್ರಹವು 2019 ರ ಸೆಪ್ಟೆಂಬರ್ಗೆ ಹೋಲಿಸಿದರೆ ಶೇಕಡಾ 3.76 ರಷ್ಟು ಏರಿಕೆಯಾಗಿದೆ. ಸೆಪ್ಟಂಬರಿನಲ್ಲಿ 91,916 ಕೋಟಿ ರೂಪಾಯಿ ಸಂಗ್ರಹವಾಗಿತ್ತು.
ಒಟ್ಟು 95,380 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹದಲ್ಲಿ ಸಿಜಿಎಸ್ಟಿ 17,582 ಕೋಟಿ ರೂ., ಎಸ್ಜಿಎಸ್ಟಿ 23,674 ಕೋಟಿ ರೂ., ಐಜಿಎಸ್ಟಿ 46,517 ಕೋಟಿ ರೂ. (ಆಮದುಗಳಲ್ಲಿ ಸಂಗ್ರಹಿಸಿದ 21,446 ಕೋಟಿ ರೂ. ಒಳಗೊಂಡಂತೆ) ಎಂಬುದಾಗಿ ಹಣಕಾಸು ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ವರದಿ ಹೇಳಿದೆ. 2019ರ ಸೆಪ್ಟೆಂಬರ್ -ಅಕ್ಟೋಬರ್ನಲ್ಲಿ ಸಲ್ಲಿಸಲಾದ ಒಟ್ಟು ಜಿಎಸ್ಟಿಆರ್ -3 ಬಿ ರಿಟರ್ನ್ಗಳ ಸಂಖ್ಯೆ 73.83 ಲಕ್ಷ ಎಂದು ಸಚಿವಾಲಯ ತಿಳಿಸಿದೆ.
“ಸರ್ಕಾರವು ಸಿಜಿಎಸ್ಟಿಗೆ 20,642 ಕೋಟಿ ರೂಪಾಯಿಗಳನ್ನು ಮತ್ತು ಐಜಿಎಸ್ಟಿಯಿಂದ ಎಸ್ಜಿಎಸ್ಟಿಗೆ 13,971 ಕೋಟಿ ರೂಪಾಯಿಗಳನ್ನು ಇತ್ಯರ್ಥಪಡಿಸಿದೆ. 2019 ರ ಅಕ್ಟೋಬರ್ ತಿಂಗಳಲ್ಲಿ ನಿಯಮಿತವಾಗಿ ಇತ್ಯರ್ಥಪಡಿಸಿದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಸಿಜಿಎಸ್ಟಿಗೆ 38,224 ಕೋಟಿ ರೂ ಮತ್ತು ಎಸ್ಜಿಎಸ್ಟಿಗೆ 37,645 ಕೋಟಿ ರೂ.”ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.