ನವದೆಹಲಿ: ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು 16 ಬಾರಿ ವಿದೇಶ ಪ್ರವಾಸಗಳನ್ನು ಹಮ್ಮಿಕೊಂಡಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದಕ್ಕಿಂತಲೂ ಹೆಚ್ಚು ಬಾರಿ ಅವರು ವಿದೇಶಕ್ಕೆ ಹಾರಿದ್ದಾರೆ ಎಂದು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಹೇಳಿದ್ದಾರೆ.
16 ವಿದೇಶ ಪ್ರವಾಸಗಳಲ್ಲಿ 9 ಪ್ರವಾಸಗಳ ಸ್ಥಳಗಳನ್ನು ಅವರು ರಹಸ್ಯವಾಗಿಟ್ಟಿದ್ದಾರೆ. ಈ ಭೇಟಿಯ ಉದ್ದೇಶವನ್ನೂ ರಹಸ್ಯವಾಗಿಟ್ಟಿದ್ದಾರೆ. ವಿದೇಶಕ್ಕೆ ರಾಹುಲ್ ಅವರು ನೀಡುತ್ತಿರುವ ರಹಸ್ಯ ಭೇಟಿಗಳ ಬಗ್ಗೆ ಕ್ರಮಕೈಗೊಳ್ಳುವುದು ನಮ್ಮ ಬೇಡಿಕೆಯಾಗಿದೆ. ಪ್ರವಾಸದ ವಿವರವನ್ನು ಬಹಿರಂಗಪಡಿಸಲು ಅವರಿಗೆ ಎದುರಾಗಿರುವ ಕಷ್ಟವಾದರೂ ಏನು ಎಂದು ನರಸಿಂಹ ರಾವ್ ಪ್ರಶ್ನಿಸಿದ್ದಾರೆ.
ಭಾರತದ ಪ್ರತಿಯೊಬ್ಬ ಸಂಸತ್ತು ಸದಸ್ಯರು ಸದನದ ರೂಢಿಗಳಿಗೆ ಅನುಗುಣವಾಗಿರಬೇಕು ಮತ್ತು ಪ್ರಯಾಣ ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು, ಅದು ಖಾಸಗಿ ಭೇಟಿಯಾಗಿದ್ದರೂ ಕೂಡ. ಪ್ರತಿಯೊಬ್ಬ ಸಂಸದರು ತಮ್ಮ ಭೇಟಿಯ ಸ್ಥಳ, ದಿನಾಂಕಗಳು ಮತ್ತು ಅವರು ಉಳಿದುಕೊಂಡಿರುವ ವಿಳಾಸಗಳನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ಸಂಸತ್ತಿಗೆ ತಿಳಿಸಲು ಸಾಧ್ಯವಿಲ್ಲದಷ್ಟು ದೊಡ್ಡ ರಹಸ್ಯವೇನು? ಅಂತಹ ಯಾವುದೇ ಮಾಹಿತಿಯನ್ನು ಲೋಕಸಭಾ ಸಚಿವಾಲಯಕ್ಕೆ ಒದಗಿಸಿಲ್ಲ. ಗಾಂಧಿ ನಿಯಮಗಳಿಗೆ ಅನುಗುಣವಾಗಿರಬೇಕು ಮತ್ತು ಅವರ ಪ್ರಯಾಣದ ಸ್ಥಳ ಮತ್ತು ಉದ್ದೇಶವನ್ನು ಬಹಿರಂಗಪಡಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.
ರಾಹುಲ್ ವಿದೇಶಿ ಪ್ರಯಾಣದ ಬಗ್ಗೆ ಬಹಳಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಅವರ ಪ್ರವಾಸಗಳಿಗೆ ಯಾರು ಹಣ ನೀಡುತ್ತಿದ್ದಾರೆ? ಅವರ ಪ್ರವಾಸಗಳ ಉದ್ದೇಶವೇನು? ಬಹಿರಂಗಪಡಿಸದೆ ಇರುವುದಕ್ಕೆ ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತಿವೆ ಎಂದಿದ್ದಾರೆ.
ರಾಹುಲ್ ವಯನಾಡಿಗಿಂತ ಹೆಚ್ಚು ಬಾರಿ ವಿದೇಶಕ್ಕೆ ತೆರಳಿದ್ದಾರೆ. ಇದೇ ಕಾರಣಕ್ಕೆ ಅಮೇಥಿ ಅವರನ್ನು ಆರಿಸದೆ ಮನೆಗೆ ಕಳುಹಿಸಿರುವುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.