ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಕೃಷಿ ಮೇಳ ಆರಂಭಗೊಂಡಿದ್ದು, ಅ.27 ರ ವರೆಗೆ ಜರುಗಲಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೃಷಿ ಮೇಳವನ್ನು ಉದ್ಘಾಟನೆಗೊಳಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
‘ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ’ ಥೀಮ್ನಲ್ಲಿ ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ನೀಡುವ ಹಾಗೂ ಸೂಕ್ತ ಸಮಯದಲ್ಲಿ ಬೆಳೆಗಳ ನಿರ್ವಹಣೆ ಮಾಡುವ ನಿಖರ ಕೃಷಿ ಪದ್ಧತಿ ಕೃಷಿ ಮೇಳದ ಹೊಸ ಆಕರ್ಷಣೆಯಾಗಿದೆ.
ವಿವಿ ಸಂಶೋಧನಾ ಕೇಂದ್ರದಿಂದ ಹೊಸದಾಗಿ ಅಭಿವೃದ್ಧಿಪಡಿಸಿರುವ ಭತ್ತ ಗಂಗಾವತಿ ಸೋನಾ, ಹಲಸು ಲಾಲ್ಬಾಗ್ ಮಧುರ, ಕಬ್ಬು, ಸೂರ್ಯಕಾಂತಿ, ಉದ್ದು, ಅಲಸಂದೆ ಬೆಳೆಗಳ ತಳಿಗಳನ್ನು ಕೃಷಿ ಮೇಳದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬೆಳೆಗಳ ಬಿತ್ತನೆ, ನಿರ್ವಹಣೆ, ಕೊಯ್ಲು ಕುರಿತು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತದೆ.
ಮೇಳದಲ್ಲಿ ಒಟ್ಟು 720 ಮಳಿಗೆಗಳಿವೆ. ಇದರಲ್ಲಿ ಕೃಷಿ ಯಂತ್ರೋಪಕರಣಕ್ಕಾಗಿಯೇ 170 ಮಳಿಗೆಗಳನ್ನು ಮೀಸಲಿಡಲಾಗಿದೆ. ಸಿರಿಧಾನ್ಯ ಹಾಗೂ ಸಾವಯವ ವಿಭಾಗದಲ್ಲಿ 70 ಮಳಿಗೆಗಳನ್ನು ಹಾಕಲಾಗಿದ್ದು, ಇದರಲ್ಲಿ ವೈವಿಧ್ಯ ಉತ್ಪನ್ನಗಳನ್ನು ವೀಕ್ಷಿಸಬಹುದು. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಕೃಷಿ ಸಂಬಂಧಿತ ಸಂಸ್ಥೆಗಳ ಮಳೆಗೆಗಳೂ ಇವೆ.
ಸಮಗ್ರ ಬೇಸಾಯ ಪದ್ಧತಿ ಪ್ರಾತಕ್ಷಿಕೆ, ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿ, ಸಿರಿಧಾನ್ಯ-ಸಾವಯವ ಕೃಷಿ ಪದ್ಧತಿ, ಜಲಾನಯನ ನಿರ್ವಹಣೆ, ಕೊಯ್ಲಿನೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನಗಳನ್ನು ಮೇಳದಲ್ಲಿ ಆಯೋಜನೆಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.