ನವದೆಹಲಿ : ಅಕ್ಟೋಬರ್ 18ರಂದು ದಕ್ಷಿಣ ಕೊರಿಯಾದ ಇಂಚಿಯಾನ್ನಲ್ಲಿ ನಡೆದ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಪುರುಷರ ಜೂನಿಯರ್ ಕೀರಿನ್ ಸ್ಪರ್ಧೆಯಲ್ಲಿ ಭಾರತೀಯ ಸೈಕ್ಲಿಸ್ಟ್ ರೊನಾಲ್ಡೊ ಸಿಂಗ್ ಚಿನ್ನದ ಪದಕವನ್ನು ಜಯಿಸಿದ್ದಾರೆ.
ರೊನಾಲ್ಡೊ ಮಾತ್ರವಲ್ಲದೇ, ಮತ್ತೋರ್ವ ಭಾರತೀಯ ಜೇಮ್ಸ್ ಸಿಂಗ್ ಕೂಡ ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಪುರುಷರ ಮತ್ತು ಮಹಿಳೆಯರ ಜೂನಿಯರ್ ಸ್ಪ್ರಿಂಟ್ ತಂಡವು ಎರಡು ಕಂಚಿನ ಪದಕಗಳನ್ನು ಗೆದ್ದಿದೆ.
ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐ) ಟ್ವಿಟರ್ ಮೂಲಕ ಪದಕ ಗೆದ್ದ ಸೈಕ್ಲಿಂಗ್ ಪಟುಗಳನ್ನು ಅಭಿನಂದಿಸಿದೆ.
“ಕೊರಿಯಾದ ಇಂಚಿಯಾನ್ನಲ್ಲಿ ನಡೆದ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಸಿಶಿಪ್ಗಳಲ್ಲಿ ಪುರುಷರ ಜೂನಿಯರ್ ಕೀರಿನ್ ಸ್ಪರ್ಧೆಯಲ್ಲಿ ರೊನಾಲ್ಡೊ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. ಇದೇ ಸ್ಪರ್ಧೆಯಲ್ಲಿ ಜೇಮ್ಸ್ ಸಿಂಗ್ ಕಂಚು ಪಡೆದರು. ಪುರುಷರ ಮತ್ತು ಮಹಿಳೆಯರ ಜೂನಿಯರ್ ಸ್ಪ್ರಿಂಟ್ ತಂಡದಲ್ಲಿ ಭಾರತ 2 ಕಂಚಿನ ಪದಕಗಳನ್ನು ಗಳಿಸಿದೆ. ಎಲ್ಲರಿಗೂ ಅಭಿನಂದನೆಗಳು” ಎಂದು ಎಸ್ಎಐ ಟ್ವೀಟ್ ಮಾಡಿದೆ.
Ronaldo Singh won the gold medal in men’s junior Kierin event at the Asian Track Cycling C’ships in Incheon, Korea. James Singh got bronze in same event. India also secured 2 bronze medals in men’s and women’s Jr. sprint team.
Congratulations to all.#KheloIndia pic.twitter.com/8vodbT27mK— SAIMedia (@Media_SAI) October 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.