ವಾಷಿಂಗ್ಟನ್: ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಸ್ಥಾನವನ್ನು ಭಾರತ ಉಳಿಸಿಕೊಂಡಿದೆ ಮತ್ತು ಅದನ್ನು ಇನ್ನಷ್ಟು ವೇಗವಾಗಿ ಬೆಳೆಸಲು ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತಕ್ಕೆ ಕಡಿಮೆ ಬೆಳವಣಿಗೆಯ ದರವನ್ನು ಊಹಿಸಿದ್ದರೂ ಕೂಡ, ದೇಶದ ಆರ್ಥಿಕತೆಯು ಇನ್ನೂ ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಗುರುವಾರ ಭಾರತೀಯ ವರದಿಗಾರರ ತಂಡಕ್ಕೆ ಅವರು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಐಎಂಎಫ್ ಮತ್ತು ವಿಶ್ವಬ್ಯಾಂಕ್ನ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಾಷಿಂಗ್ಟನ್ಗೆ ಪ್ರಯಾಣಿಸಿದ್ದಾರೆ. ಇತ್ತೀಚಿನ ಐಎಂಎಫ್ ವರದಿಯಲ್ಲಿ ಚೀನಾ ಮತ್ತು ಭಾರತ ದೇಶಗಳ ಬೆಳವಣಿಗೆಯ ದರಗಳು ಶೇಕಡಾ 6.1 ರಷ್ಟಿದೆ ಎಂದು ಅಂದಾಜಿಸಲಾಗಿದ್ದರೂ, ಚೀನಾದೊಂದಿಗೆ ಖಂಡಿತವಾಗಿಯೂ ಹೋಲಿಕೆ ಮಾಡುವ ಅಪಾಯವಿಲ್ಲ ಎಂದು ಅವರು ಹೇಳಿದ್ದಾರೆ.
ಐಎಂಎಫ್ ತನ್ನ ಇತ್ತೀಚಿನ ಊಹೆಯಲ್ಲಿ ಎಲ್ಲಾ ಜಾಗತಿಕ ಆರ್ಥಿಕತೆಗಳಿಗೂ ಪ್ರಗತಿ ದರವನ್ನು ಕುಗ್ಗಿಸಿದೆ. ಭಾರತಕ್ಕೂ ಪ್ರಗತಿ ದರ ಕುಗ್ಗಿಸಿದೆ. ಇದರ ಹೊರತಾಗಿಯೂ,, ಭಾರತ ಅತೀ ವೇಗದ ಆರ್ಥಿಕತೆಯಾಗಿ ಬೆಳೆಯುತ್ತಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ಜಾಗತಿಕ ಸನ್ನಿವೇಶದಲ್ಲಿ ಭಾರತ ಇಂದಿಗೂ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬುದನ್ನು ಯಾರು ಅಲ್ಲಗೆಳೆಯುವಂತಿಲ್ಲ, ಮುಂದೆ ಅದು ಇನ್ನಷ್ಟು ಬೆಳೆಯಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.