ಮುಜಾಫರನಗರ: ವಿವಿಧ ಸಾಮಾಜಿಕ ಸುಧಾರಣೆಗಳನ್ನು ಪರಿಚಯಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಉತ್ತರಪ್ರದೇಶದ ಮುಜಾಫರನಗರದ ಮುಸ್ಲಿಂ ಮಹಿಳೆಯರು ವಿಶೇಷವಾದ ರೀತಿಯಲ್ಲಿ ಧನ್ಯವಾದವನ್ನು ಅರ್ಪಣೆ ಮಾಡಿದ್ದಾರೆ. ಇಲ್ಲಿನ ಮುಸ್ಲಿಂ ಮಹಿಳೆಯರ ತಂಡವೊಂದು ಮೋದಿಯವರಿಗಾಗಿ ದೇವಾಲಯವನ್ನು ನಿರ್ಮಿಸುತ್ತಿದೆ. ಪ್ರಧಾನಮಂತ್ರಿ ಮುಸ್ಲಿಂ ಮಹಿಳೆಯರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಮತ್ತು ಅವರು ಆರಾಧನೆಗೆ ಅರ್ಹರು ಎಂದು ಈ ತಂಡದ ನಾಯಕಿ ರೂಬಿ ಘಜ್ನಿ ಹೇಳಿದ್ದಾರೆ.
“ಮೋದಿ ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ಮೂಲಕ ನಮ್ಮ ಜೀವನದಲ್ಲಿ ಅಗಾಧ ಬದಲಾವಣೆಯನ್ನು ತಂದಿದ್ದಾರೆ. ಅವರು ನಮಗೆ ಅನಿಲ ಸಂಪರ್ಕ ಮತ್ತು ಉಚಿತ ಮನೆಗಳನ್ನು ಸಹ ನೀಡಿದ್ದಾರೆ. ಯಾರಾದರು ಇದಕ್ಕಿಂತಲೂ ಹೆಚ್ಚಿನದ್ದನ್ನು ಬಯಸಲು ಸಾಧ್ಯವೇ?” ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪ್ರಯತ್ನ ಜಾಗತಿಕ ಮಟ್ಟದಲ್ಲಿ ಸನ್ಮಾನವಾಗುತ್ತಿದ್ದರೆ, ಅವರನ್ನು ತಮ್ಮ ದೇಶದಲ್ಲಿಯೂ ಗೌರವಿಸಬೇಕು ಎಂದು ಮಹಿಳೆಯರು ಹೇಳಿದ್ದಾರೆ.
ಈ ತಂಡ ಗುರುವಾರ ಜಿಲ್ಲಾಧಿಕಾರಿಗೆ ಜ್ಞಾಪಕ ಪತ್ರವನ್ನು ಹಸ್ತಾಂತರಿಸಿದ್ದು, ದೇವಾಲಯದ ಬಗ್ಗೆ ಮಾಹಿತಿಯನ್ನು ನೀಡಿದೆ. ದೇವಾಲಯದ ನಿರ್ಮಾಣಕ್ಕೆ ಅವರ ಸ್ವಂತ ಉಳಿತಾಯದಿಂದ ಹಣಕಾಸನ್ನು ಈ ಮಹಿಳೆಯರು ಒದಗಿಸುತ್ತಿದ್ದಾರೆ.
“ಮುಸ್ಲಿಂ ಮಹಿಳೆಯರು ಪ್ರಧಾನಿ ಮತ್ತು ಅವರ ನೀತಿಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ ಮತ್ತು ಅವರನ್ನು ಮುಸ್ಲಿಂ ವಿರೋಧಿ ಎಂದು ಬ್ರಾಂಡ್ ಮಾಡಲು ಯಾರಿಗೂ ಯಾವುದೇ ಕಾರಣವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಾವು ಕಳುಹಿಸಲು ಬಯಸುತ್ತೇವೆ” ಎಂದು ಘಜ್ನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.