ನವದೆಹಲಿ: ಅರುಣಾಚಲ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಬೃಹತ್ ಪ್ರಮಾಣದಲ್ಲಿ ಸುಧಾರಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಕಾರ್ಯೋನ್ಮುಖಗೊಂಡಿದೆ, ಭಾರತದ ದೂರದ ಮೂಲೆಯಲ್ಲಿರುವ ಈ ರಾಜ್ಯವನ್ನು ದೇಶದ ಇತರ ಭಾಗಗಳೊಂದಿಗೆ ಸಂಯೋಜಿಸಲು ಪ್ರವಾಸೋದ್ಯಮ ಸಾಕಷ್ಟು ಸಹಾಯ ಮಾಡಲಿದೆ.
ಅರುಣಾಚಲ ಪ್ರದೇಶಕ್ಕೆ ಹೆಚ್ಚು ದೇಶೀಯ ಪ್ರವಾಸಿಗರನ್ನು ಆಕರ್ಷಿಸಲು ಶಕ್ತಿಯಿರುವ ಭಾಗವೆಂದರೆ ಅದು ಡಾಂಗ್ ಗ್ರಾಮ, ಭಾರತದ ಇತರ ಭೂಪ್ರದೇಶಕ್ಕಿಂತ ಮೊದಲು ಅಲ್ಲಿ ಸೂರ್ಯನ ಕಿರಣಗಳು ಅಪ್ಪಳಿಸುತ್ತವೆ. ಸಾಹಸ ಕ್ರೀಡೆಗಳ ಮೂಲಸೌಕರ್ಯಗಳನ್ನು ಸುಧಾರಣೆಗೊಳಿಸುವ ಉದ್ದೇಶದಿಂದ ಡಾಂಗ್ನ ಉತ್ತರದಲ್ಲಿರುವ ಲೋಹಿತ್ ನದಿಯಲ್ಲಿ ರಾಫ್ಟಿಂಗ್ ಸೌಲಭ್ಯಗಳನ್ನು ಪರಿಚಯಿಸಲು ಸೇನೆಯು ಮುಂದಾಗಿದೆ.
ಅರುಂಚಲ್ ಹಳ್ಳಿಗಳ ನೈಸರ್ಗಿಕ ಭೂದೃಶ್ಯವನ್ನು ಪರಿಗಣಿಸಿದರೆ ಅಲ್ಲಿ ಯೋಗ ಮತ್ತು ಧ್ಯಾನ ಕೇಂದ್ರಗಳನ್ನು ಸ್ಥಾಪಿಸಲು ಹೆಚ್ಚಿನ ಅವಕಾಶವಿದೆ. ಇದಲ್ಲದೆ, ಅರುಂಚಲ್ ಪ್ರದೇಶವು ಮಿಲಿಟರಿ ಇತಿಹಾಸಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. 1962 ರಲ್ಲಿ ಚೀನಿಯರ ವಿರುದ್ಧ ಹೋರಾಡಿ ಹುತಾತ್ಮರಾದ 400 ಭಾರತೀಯ ಸೈನಿಕರ ತ್ಯಾಗವನ್ನು ಸ್ಮರಿಸುವ ಯುದ್ಧ ಸ್ಮಾರಕವು ಪ್ರಸಿದ್ಧ ವಾಲಾಂಗ್ ಕದನದ ಸ್ಥಳವಾದ ವಾಲೊಂಗ್ನಲ್ಲಿದೆ.
ರಾಜ್ಯದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಜನಪ್ರಿಯಗೊಳಿಸುವುದು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯ ಒಂದು ಭಾಗವಾಗಿದೆ. ಪ್ರವಾಸಿಗರಿಗೆ ಆರಾಮದಾಯಕ ಮತ್ತು ನಿರಂತರ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕಾದ ಅಗತ್ಯವಿದೆ. ಆಗ ಮಾತ್ರ ಅವರುಗಳು ಆರಾಮವಾಗಿ ಪ್ರವಾಸಿ ಸಮಯವನ್ನು ಆಸ್ವಾದಿಸಲು ಸಹಾಯವಾಗುತ್ತದೆ.
ಇದನ್ನು ಗಮನದಲ್ಲಿಟ್ಟುಕೊಂಡು, ಪವನ್ ಹಂಸ್ ಹೆಲಿಕಾಪ್ಟರ್ ಸೇವೆಗಳನ್ನು ತೇಜುವಿನಿಂದ ವಾಲೊಂಗ್ಗೆ ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ವಾಲೊಂಗ್ನ ಉತ್ತರಕ್ಕೆ ಇ-ರಿಕ್ಷಾಗಳನ್ನು ಪರಿಚಯಿಸಲು ಯೋಜಿಸಲಾಗಿದೆ.
ಈ ಎಲ್ಲಾ ಯೋಜನೆಗಳು ಯಶಸ್ವಿಯಾದರೆ, ಅರುಣಾಚಲ ಪ್ರದೇಶವು ಶೀಘ್ರದಲ್ಲೇ ಭಾರತೀಯ ಪ್ರವಾಸಿಗರು ನೋಡಲೇಬೇಕಾದ ತಾಣವಾಗಿ ಪರಿವರ್ತನೆಗೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.