ಜೈಪುರ: ಭಾರತದ ರಾಷ್ಟ್ರಗೀತೆಯಿಂದ ‘ಅಧಿನಾಯಕ’ ಎಂಬ ಶಬ್ದವನ್ನು ತೆಗೆದು ಹಾಕಬೇಕು ಎಂದು ರಾಜಸ್ಥಾನದ ಗವರ್ನರ್ ಕಲ್ಯಾಣ್ ಸಿಂಗ್ ಹೇಳಿದ್ದಾರೆ. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ರಾಜಸ್ಥಾನ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಜನ ಗಣ ಮನ ಅಧಿನಾಯಕ ಜಯ ಹೇ’ ಎಂಬ ವಾಕ್ಯದಿಂದ ಅಧಿನಾಯಕ ಎಂಬ ಶಬ್ದವನ್ನು ತೆಗೆದು ಹಾಕಬೇಕು. ಈ ಶಬ್ದ ಬ್ರಿಟಿಷ್ ಆಡಳಿತಗಾರರನ್ನು ಹೊಗಳುವುದಕ್ಕಾಗಿ ಇಡಲಾಗಿದೆ ಎಂದಿದ್ದಾರೆ.
ಅಲ್ಲದೇ ಅಧಿನಾಯಕದ ಬದಲು ಮಂಗಳ ಶಬ್ದವನ್ನು ಸೇರಿಸಬೇಕು. ಜನ ಗಣ ಮನ ಅಧಿನಾಯಕ ವಾಕ್ಯದ ಬದಲು ‘ಜನ ಗಣ ಮನ ಮಂಗಳ ಜಯ ಹೇ’ ಇದರ ಎಂದು ಹಾಡಬೇಕು ಎಂದಿದ್ದಾರೆ.
ಅವರ ಈ ಹೇಳಿಕೆಗೆ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ರಾಷ್ಟ್ರಗೀತೆಯನ್ನು ಮನ ಬಂದಂತೆ ಬದಲಾಯಿಸುವುದು ಸುಲಭದ ಮಾತಲ್ಲ ಎಂದು ಎಚ್ಚರಿಕೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.