ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ದೇಶದಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ವೇಳೆಗೆ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿನ ಕಾರ್ಯಗಳು ಭರದಿಂದ ಸಾಗುತ್ತಿದೆ. ಮಂಗಳೂರಿನ ಕೆಎಂಎಫ್ ಕೂಡ ಈ ಕಾರ್ಯಕ್ಕೆ ಕೈಜೋಡಿಸಿದೆ. ಸ್ವಚ್ಛ ಭಾರತದ ಧ್ಯೇಯದೊಂದಿಗೆ ಮಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಅದು ಮಹತ್ವದ ಕ್ರಮವನ್ನು ಕೈಗೊಂಡಿದೆ.
ಬಳಕೆ ಮಾಡಿದ ಹಾಲಿನ ಪ್ಯಾಕೆಟ್ ಮತ್ತು ಸಿಪಿಪಿ ಬಾಟಲ್ಗಳನ್ನು ತಾವು ಖರೀದಿಸಿದ ಅಂಗಡಿಗೆ ಮರಳಿ ನೀಡಿ ಎಂದು ಕೆಎಂಎಫ್ ತನ್ನ ಗ್ರಾಹಕರಿಗೆ ಮನವಿಯನ್ನು ಮಾಡಿಕೊಂಡಿದೆ. ಅಂಗಡಿಗಳಿಂದ ವಿತರಕರು ಇವುಗಳನ್ನು ಸಂಗ್ರಹಿಸಲಿದ್ದಾರೆ. ಹೀಗೆ ಸಂಗ್ರಹಿಸಿದ ಪ್ಯಾಕೆಟ್ಗಳನ್ನು ಮರುಸಂಸ್ಕರಣಾ ಘಟಕಕ್ಕೆ ನೀಡಿ ಮರು ಬಳಕೆ ಮಾಡಲಾಗುತ್ತದೆ ಎಂದು ಅದು ಹೇಳಿದೆ.
ಕೆಎಎಂಎಫ್ ಸೂಚನೆಯಂತೆ ಗ್ರಾಹಕರು ತಾವು ಹಾಲು ಖರೀದಿ ಮಾಡಿದ ಅಂಗಡಿಗೆ ಪ್ಯಾಕೆಟ್ಗಳನ್ನು ವಾಪಾಸ್ ನೀಡಿದರೆ, ಅದು ಮರು ಬಳಕೆಯಾಗುತ್ತದೆ. ಇದರಿಂದ ಕಸದ ಸಮಸ್ಯೆ ಸಾಕಷ್ಟು ಪ್ರಮಾಣದಲ್ಲಿ ತಗ್ಗುತ್ತದೆ.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ” ಸ್ಚಚ್ಚತಾ ಹೀ ಸೇವಾ 2019′ ಎಂಬ ಯೋಜನೆಯನ್ನು ಪ್ರಾರಂಭಿಸಿರುವ ಹಿನ್ನಲೆಯಲ್ಲಿ ಗ್ರಾಹಕರು ಹಾಗೂ ವಿತರಕರಲ್ಲಿ ಜಾಗೃತಿ ಮೂಡಿಸಲು ಕೆಎಂಎಫ್ ಮುಂದಾಗಿದೆ. ನಂದಿನಿ ಹಾಲಿನ ಖಾಲಿ ಪ್ಯಾಕೆಟ್ ಮತ್ತು ಸಿಪಿಪಿ ಬಾಟಲ್ಗಳನ್ನು ವಿತರಕರ ಮೂಲಕ ಹಿಂಪಡೆದು ಅದನ್ನು ಮರು ಸಂಸ್ಕರಿಸುವ ಯೋಜನೆಯನ್ನು ಅಕ್ಟೋಬರ್ 2 ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.