ನವದೆಹಲಿ: ಸುಪ್ರೀಂ ಕೋರ್ಟ್ನಲ್ಲಿನ ಅಯೋಧ್ಯೆ ಭೂ ವಿವಾದ ವಿಚಾರಣೆಯ 32 ನೇ ದಿನವಾದ ಇಂದು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಹಿಂದೂ ಮತ್ತು ಮುಸ್ಲಿಂ ದಾವೇದಾರರಿಗೆ ಅಕ್ಟೋಬರ್ 18 ರೊಳಗೆ ಎಲ್ಲಾ ವಾದಗಳನ್ನು ಕೊನೆಗೊಳಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಸಮಯದ ಚೌಕಟ್ಟಿಗೆ ಬದ್ಧರಾಗಿರಿ, ಇಲ್ಲದಿದ್ದರೆ ತೀರ್ಪು ನೀಡುವುದು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
“ಅಕ್ಟೋಬರ್ 18 ರಂದು ವಾದಗಳು ಮುಕ್ತಾಯಗೊಳ್ಳದಿದ್ದರೆ, ಹೆಚ್ಚುವರಿ ದಿನಗಳನ್ನು ನೀಡಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ನೀವು ನಮಗೆ ಕೊಟ್ಟಿರುವ ದಾಖಲೆಯ ಪ್ರಮಾಣವನ್ನು ಗಮನಿಸಿದರೆ ನಾಲ್ಕು ವಾರಗಳಲ್ಲಿ ತೀರ್ಪು ನೀಡುವುದು ಒಂದು ದೊಡ್ಡ ಪವಾಡವೇ ಆಗಲಿದೆ” ಎಂದು ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು, ಅಯೋಧ್ಯಾ ಪ್ರಕರಣದ ಸಂವಿಧಾನ ಪೀಠದ ಮುಖ್ಯಸ್ಥರೂ ಆಗಿರುವ ಗೋಗಯ್ ನವೆಂಬರ್ 17 ರೊಳಗೆ ನಿವೃತ್ತಿ ಹೊಂದಲಿರುವ ಕಾರಣ ವಾದಗಳನ್ನು ಪೂರ್ಣಗೊಳಿಸುವ ದಿನಾಂಕವು ಮಹತ್ವದ್ದಾಗಿದೆ. ಹೊಸ ನ್ಯಾಯಮೂರ್ತಿಗಳಿಗೆ ತೀರ್ಪು ನೀಡಲು ಮತ್ತೆ ಹೊಸದಾಗಿ ವಿಚಾರಣೆಯನ್ನು ನಡೆಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಲ್ಕು ವಾರಗಳಲ್ಲಿ ತೀರ್ಪು ಹೊರಬರುವುದು “ಪವಾಡ” ಎಂದು ಅವರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ 2.77 ಎಕರೆ ವಿವಾದಿತ ಜಮೀನಿನ ಮಾಲೀಕತ್ವವನ್ನು ಕೋರಿ ಹಿಂದೂ ಮತ್ತು ಮುಸ್ಲಿಂರು ದಾವೇ ಹೂಡಿದ್ದಾರೆ, ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಐವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವು ಸಕ್ರಿಯ ವಿಚಾರಣೆಗಳನ್ನು ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.