ನವದೆಹಲಿ: ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್ನ ಕೆಲವು ಭಾಗಗಳಿಗೆ ಭೇಟಿ ಕೊಡಲು ಸಾರ್ವಜನಿಕರಿಗೆ ಅನುಮತಿ ನೀಡುವ ಬಗ್ಗೆ ಭಾರತೀಯ ಸೇನೆಯು ಚಿಂತನೆ ನಡೆಸುತ್ತಿದೆ. ಈ ನಿಟ್ಟಿನ ಪ್ರಸ್ತಾಪವನ್ನು ಈಗಾಗಲೇ ಅದು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅತ್ಯಂತ ಕಠಿಣ ಹವಾಗುಣದ ಬಗೆಗಿನ ಅನುಭವವನ್ನು ಪಡೆಯುವ ಅವಕಾಶವನ್ನು ಸಾರ್ವಜನಿಕರಿಗೆ ನೀಡುವ ನಿಟ್ಟಿನಲ್ಲಿ ಈ ಚಿಂತನೆಯನ್ನು ನಡೆಸಲಾಗುತ್ತಿದೆ. ಈ ಬಗೆಗಿನ ನಿರ್ಧಾರ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಆದರೆ ಈ ನಿಟ್ಟಿನಲ್ಲಿ ಗಂಭೀರವಾಗಿಯೇ ಚಿಂತನೆ ಮಾಡಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸಿಯಾಚಿನ್ ಕಾರ್ಯತಾಂತ್ರಿಕವಾಗಿ ಅತ್ಯಂತ ಮಹತ್ವದ್ದಾಗಿದೆ. ಯಾಕೆಂದರೆ ಆ ಪ್ರದೇಶದ ಭಾರತದ ನಿಯಂತ್ರಣದಲ್ಲಿರುವವರೆಗೂ ಪಾಕಿಸ್ಥಾನ ಸೇನೆಗೆ ಚೀನೀಯರೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗುವುದಿಲ್ಲ ಮತ್ತು ಲಡಾಖ್ಗೆ ಅಪಾಯವನ್ನು ಉಂಟು ಮಾಡಲು ಸಾಧ್ಯವಾಗುವುದಿಲ್ಲ. ಇದು ಚೀನಾದ ನಿಯಂತ್ರಣದಲ್ಲಿರುವ ಷಾಕ್ಸ್ಗಮ್ ಕಣಿವೆ ಮತ್ತು ಪಾಕಿಸ್ಥಾನ ಆಕ್ರಮಿಸಿರುವ ಬಲ್ತಿಸ್ಥಾನ್ ನಡುವಿನ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.
“ಸಿಯಾಚಿನ್ ಗ್ಲೇಸಿಯರ್ಗೆ ಸಾರ್ವಜನಿಕರಿಗೆ ಪ್ರವೇಶವನ್ನು ನೀಡುವ ಪ್ರಸ್ತಾವನೆಯನ್ನು ಹೇಗೆ ಕಾರ್ಯಗತಗೊಳಿಸಬಹುದು, ಸರಕು ಸಾಗಾರಣೆ ಮುಂತಾದ ವಿಷಯಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಸಿಯಾಚಿನ್ ಬೇಸ್ ಕ್ಯಾಂಪ್ ಮತ್ತು ಹತ್ತಿರದ ಕೆಲವು ಪೋಸ್ಟ್ಗಳಿಗೆ ಭೇಟಿ ನೀಡಲು ಜನರಿಗೆ ಅವಕಾಶ ನೀಡುವ ಸಾಧ್ಯತೆಯನ್ನು ನಾವು ನೋಡುತ್ತಿದ್ದೇವೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
2007 ರಿಂದ, ಸೇನೆಯು ಪ್ರತಿವರ್ಷ ಸಿಯಾಚಿನ್ ಗ್ಲೇಸಿಯರ್ಗೆ ನಾಗರಿಕ ಚಾರಣವನ್ನು ನಡೆಸುತ್ತಿದೆ.
ಸಿಯಾಚಿನ್ ಕಾಲವಲಿಗಾಗಿ ಪ್ರತಿದಿನ 5 ರಿಂದ 7 ಕೋಟಿ ರೂ. ಖರ್ಚು ಮಾಡುವ ಭಾರತ, ಅಲ್ಲಿ ಸುಮಾರು 3,000 ಸೈನಿಕರನ್ನು ನಿಯೋಜಿಸಿದೆ, ಅಲ್ಲಿ ತಾಪಮಾನವು ಮೈನಸ್ 60 ಡಿಗ್ರಿ ಸೆಲ್ಸಿಯಸ್ಗೆ ಇಳಿಯುತ್ತದೆ. 1984 ರ ಏಪ್ರಿಲ್ನಲ್ಲಿ ಸೇನೆಯು ಜನರಿಲ್ಲದ ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿದಾಗಿನಿಂದ 1,000 ಕ್ಕೂ ಹೆಚ್ಚು ಸೈನಿಕರು ಈ ಪ್ರದೇಶವನ್ನು ಕಾಯುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ, ಇದು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಾಗಿದೆ.
ಭಾರತ ಮತ್ತು ಪಾಕಿಸ್ಥಾನದ ನಡುವೆ 2003ರ ನವೆಂಬರ್ ತಿಂಗಳಿನಲ್ಲಿ ನಡೆದ ಕದನ ವಿರಾಮದ ನಂತರ ಇಲ್ಲಿ ಬಂದೂಕುಗಳು ಸ್ತಬ್ಧಗೊಂಡಿವೆ. ಯಾವುದೇ ಕದನವಿರಾಮ ಉಲ್ಲಂಘನೆಗಳು ಇಲ್ಲಿ ನಡೆದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.