ನವದೆಹಲಿ: ಜನಸಂಘದ ಸಹ ಸಂಸ್ಥಾಪಕ ಮತ್ತು ಆರ್ಎಸ್ಎಸ್ ಚಿಂತಕ ದೀನದಯಾಳ್ ಉಪಾಧ್ಯಾಯ ಅವರ 103ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಗೃಹಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಧೀಮಂತ ನಾಯಕನಿಗೆ ಗೌರವ ನಮನಗಳನ್ನು ಸಲ್ಲಿಕೆ ಮಾಡಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ಭಾರತದ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಂದಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರಿಗೆ ನಮನಗಳು. ದೀನ ದಲಿತರಿಗೆ ಸಹಾನುಭೂತಿಯೊಂದಿಗೆ ಸೇವೆ ಸಲ್ಲಿಸುವ ಅವರ ಜೀವನ ಸಂದೇಶವು ಅನುಕರಣೀಯವಾದುದು” ಎಂದಿದ್ದಾರೆ. ಅಲ್ಲದೇ ಉಪಾಧ್ಯಾಯರ ಜೀವನ ಸಾಧನೆ ತಿಳಿಸುವ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
Paying homage to one of the greatest icons of India, Pandit Deendayal Upadhyaya Ji. His life’s message of serving the most downtrodden with compassion resonates far and wide! pic.twitter.com/6pTS28oaCB
— Narendra Modi (@narendramodi) September 25, 2019
1916ರ ಸೆಪ್ಟೆಂಬರ್ 25 ರಂದು ಜನಿಸಿದ ದೀನದಯಾಳ್ ಉಪಾಧ್ಯಾಯ ಭಾರತೀಯ ಜನ ಸಂಘದ ಸಹ ಸಂಸ್ಥಾಪಕರಾಗಿದ್ದಾರೆ. ನಂತದ ಭಾರತೀಯ ಜನತಾ ಪಕ್ಷವಾಗಿ ಉದಯವಾಯಿತು. ಉಪಧ್ಯಾಯರು ಆರ್ ಎಸ್ ಎಸ್ ಸಿದ್ಧಾಂತದ ಚಿಂತಕರಾಗಿದ್ದರು.1967 ರಲ್ಲಿ ಜನ ಸಂಘದ ಅಧ್ಯಕ್ಷರಾಗಿದ್ದರು.
ಉಪ ರಾಷ್ಟ್ರಪತಿಗಳು ಟ್ವಿಟ್ ಮಾಡಿ, “ಜನ್ಮ ದಿನಾಚರಣೆಯಂದು ಶ್ರೀ ದೀನ್ ದಯಾಳ್ ಉಪಾಧ್ಯಾಯ ಅವರಿಗೆ ನನ್ನ ಗೌರವ ನಮನಗಳು. ಅವರು ಅದ್ಭುತ ದೂರದೃಷ್ಟಿ, ಶ್ರೇಷ್ಠ ಚಿಂತನೆ ಮತ್ತು ಸ್ಪೂರ್ತಿದಾಯಕ ವ್ಯಕ್ತಿತ್ವ ಹೊಂದಿದ್ದರು, ಅವರು ತಳಮಟ್ಟದಲ್ಲಿ ಜನರ ಉನ್ನತಿಗಾಗಿ ಅವಿಶ್ರಾಂತ ಕೆಲಸ ಮಾಡಿದ್ದರು” ಎಂದಿದ್ದಾರೆ.
My tributes to Shri Deendayal Upadhyay Ji on his birth anniversary. He was a visionary, a great intellectual and an inspiring personality who worked relentlessly for the upliftment of people at the grassroot level. #DeenDayalUpadhyay pic.twitter.com/lcpvr5RGFX
— VicePresidentOfIndia (@VPSecretariat) September 25, 2019
ಕೇಂದ್ರ ಗೃಹಸಚಿವ ಅಮಿತ್ ಶಾ, ಸಚಿವ ಕಿರಣ್ ರಿಜ್ಜು ಸೇರಿದಂತೆ ಅನೇಕ ಗಣ್ಯರೂ ದೀನ್ ದಯಾಳ್ ಉಪಾಧ್ಯಾಯ ಅವರಿಗೆ ಗೌರವಗಳನ್ನು ಸಲ್ಲಿಸಿದ್ದಾರೆ.
पं. दीनदयाल उपाध्याय जी एक ऐसे युगद्रष्टा थे जिनके द्वारा बोये गए विचारों व सिद्धांतों के बीज ने देश को एक वैकल्पिक विचारधारा देने का काम किया। उनकी विचारधारा सत्ता प्राप्ति के लिए नहीं बल्कि राष्ट्र के पुनर्निर्माण के लिए थी और भारत को उसके गौरव पर पुनर्स्थापित करने के लिए थी। pic.twitter.com/hp8iJ8sg9o
— Amit Shah (@AmitShah) September 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.