ವಾಷ್ಟಿಂಗ್ಟನ್: ಭಾರತೀಯ ಸೇನೆ ಮತ್ತು ಅಮೆರಿಕಾ ಸೇನೆ ನಡುವೆ ನಡೆಯುತ್ತಿರುವ ಜಂಟಿ ಸಮರಾಭ್ಯಾಸದ ವೇಳೆಯಲ್ಲಿ ಭಾರತೀಯ ಯೋಧರಿಗಾಗಿ ಅಮೆರಿಕಾದ ಆರ್ಮಿ ಬ್ಯಾಂಡ್ ಭಾರತದ ರಾಷ್ಟ್ರ ಗೀತೆ ‘ಜನ ಗಣ ಮನ’ವನ್ನು ನುಡಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬುಧವಾರ ಜಂಟಿ ಸಮರಾಭ್ಯಾಸದ ಕೊನೆಯ ದಿನವಾಗಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗಿದೆ.
ನವದೆಹಲಿ ಮತ್ತು ಅಮೆರಿಕಾದ ನಡುವಣ ರಕ್ಷಣಾ ಸಹಕಾರದ ಭಾಗವಾಗಿ ‘ಯುದ್ಧ್ ಅಭ್ಯಾಸ್’ ಎಂಬ ಜಂಟಿ ಮಿಲಿಟರಿ ವ್ಯಾಯಾಮ ಕಳೆದ ವಾರ ಶುಕ್ರವಾರ ವಾಷಿಂಗ್ಟನ್ನಲ್ಲಿ ಪ್ರಾರಂಭವಾಗಿತ್ತು. ಜಂಟಿ ಸಮರಾಭ್ಯಾಸ ಬುಧವಾರ ಅಮೆರಿಕಾದ ರಾಜಧಾನಿಯಾದ ವಾಷಿಂಗ್ಟನ್ನ ಜಾಯಿಂಟ್ ಬೇಸ್ ಲೂಯಿಸ್ ಮ್ಯಾಕ್ಕಾರ್ಡ್ನಲ್ಲಿ ಕೊನೆಗೊಂಡಿತು.
ಕಳೆದ ಭಾನುವಾರ ಭಾರತೀಯ ಮತ್ತು ಅಮೆರಿಕನ್ ಸೇನೆಯ ಸೈನಿಕರು ಅಸ್ಸಾಂ ರೆಜಿಮೆಂಟ್ನ ಮಾರ್ಚಿಂಗ್ ಸಾಂಗ್ ‘ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ’ಯನ್ನು ಹಾಡುತ್ತಿರುವ ಮತ್ತು ಅದಕ್ಕೆ ನೃತ್ಯ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಈ ಹಾಡು ಎರಡನೇ ವಿಶ್ವಯುದ್ಧದ ನೈಜ ಕಥೆಯೊಂದನ್ನು ಆಧರಿಸಿದೆ, ಭಾರತೀಯ ಸೇನೆಯ ಸೈನಿಕ ಬದ್ಲುರಾಮ್ ಜಪಾನ್ ವಿರುದ್ಧ ಹೋರಾಡಿ ಮರಣಹೊಂದಿದ್ದ. ಬದ್ಲುರಾಮ್ ಸಾವಿನ ನಂತರ, ಒಬ್ಬ ಅಧಿಕಾರಿ ಬದ್ಲುರಾಮ್ ಸಾವನ್ನು ಸೈನ್ಯಕ್ಕೆ ವರದಿ ಮಾಡಲು ಮರೆತಿದ್ದರು. ಇದರ ಪರಿಣಾಮವಾಗಿ, ಬದ್ಲುರಾಮ್ನ ಆಹಾರ ಸಾಮಾಗ್ರಿ ಸೇನಾ ಘಟಕಕ್ಕೆ ಹೆಚ್ಚುವರಿ ಪಡಿತರ ರೂಪದಲ್ಲಿ ಬರುತ್ತಲೇ ಇತ್ತು. ಈ ಆಹಾರವೇ ಅಂತಿಮವಾಗಿ ಭಾರತೀಯ ಸೈನಿಕರ ಉಳಿವಿಗೆ ಕಾರಣವಾಗಿತ್ತು. ಈ ಕಥೆಯನ್ನೇ ಆಧರಿಸಿ ‘ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ’ ಎಂಬ ಹಾಡನ್ನು ರಚನೆ ಮಾಡಲಾಗಿದೆ.
#WATCH USA: American Army band playing Indian National Anthem during the Exercise Yudh Abhyas 2019 at Joint Base Lewis, McChord. pic.twitter.com/J9weLpKD3X
— ANI (@ANI) September 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.