ಗಾಂಧೀನಗರ: ಇಂದು 69ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಗಾಂಧೀನಗರಕ್ಕೆ ತೆರಳಿ ತಮ್ಮ ತಾಯಿ ಹೀರಾಬೆನ್ ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಮಧ್ಯಾಹ್ನದ ಭೋಜನವನ್ನು ಅವರೊಂದಿಗೇ ಸವಿದಿದ್ದಾರೆ.
98 ವರ್ಷದ ಹೀರಾಬೆನ್ ಅವರು ರೈಸಿನ್ ಗ್ರಾಮದಲ್ಲಿ ತಮ್ಮ ಕಿರಿಯ ಮಗ ಪಂಕಜ್ ಮೋದಿ ಅವರೊಂದಿಗೆ ವಾಸಿಸುತ್ತಿದ್ದಾರೆ. ತಮ್ಮ ಕೆಲಸದ ಒತ್ತಡದ ನಡುವೆಯೂ ಮೋದಿ ವಿಶೇಷ ದಿನಗಳಲ್ಲಿ ತಮ್ಮ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಳ್ಳುತ್ತಾರೆ.
ಎರಡನೇ ಅವಧಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನವನ್ನು ಸ್ವೀಕರಿಸಿದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಕುಳಿತು ಟಿವಿ ಮೂಲಕ ಹೀರಾಬೆನ್ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದರು. ತನ್ನ ರಾಷ್ಟ್ರಪತಿಯವರಿಂದ ಪ್ರಮಾಣವಚನ ಸ್ವೀಕರಿಸಿದನ್ನು ನೋಡಿ ಚಪ್ಪಾಳೆ ತಟ್ಟಿದ್ದರು. ಮಗ ಪ್ರತಿಸಲ ಮನೆಗೆ ಬಂದಾಗಲೂ ಪ್ರಸಾದ, ಸಿಹಿ ತಿನಿಸಿ, ಒಂದಿಷ್ಟು ಹಣವನ್ನು ಅವರ ಕೈಗಿತ್ತು ಆಶೀರ್ವಾದ ಮಾಡುತ್ತಾರೆ.
ಜನ್ಮದಿನದ ಪ್ರಯುಕ್ತ ಸೋಮವಾರ ರಾತ್ರಿಯೇ ಮೋದಿ ಗುಜರಾತಿಗೆ ಆಗಮಿಸಿದ್ದಾರೆ. ಏಕತಾ ಪ್ರತಿಮೆಗೆ ಭೇಟಿ ನೀಡಿದ್ದಾರೆ. ನಮಾಮಿ ನರ್ಮದೆ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.