ನವದೆಹಲಿ: ‘ಮಹಾಪರೀಕ್ಷಾ’ದಲ್ಲಿ ತೇರ್ಗಡೆಯಾದ 16 ವರ್ಷದ ಬಾಲಕ ಪ್ರಿಯವ್ರತನನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಪರೀಕ್ಷೆಯನ್ನು ತೇರ್ಗಡೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಈತ ಪಾತ್ರನಾಗಿದ್ದಾನೆ.
ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ” ಅದ್ಭುತ! ಈ ಸಾಧನೆ ಮಾಡಿದ ಪ್ರಿಯವ್ರತನಿಗೆ ಅಭಿನಂದನೆಗಳು. ನಿನ್ನ ಸಾಧನೆ ಅನೇಕರಿಗೆ ಸ್ಫೂರ್ತಿಯ ಸೆಲೆಯಾಗಲಿದೆ” ಎಂದಿದ್ದಾರೆ.
Excellent!
Congratulations to Priyavrata for this feat. His achievement will serve as a source of inspiration for many! https://t.co/jIGFw7jwWI
— Narendra Modi (@narendramodi) September 8, 2019
ಪ್ರಿಯವ್ರತನ ಸಾಧನೆಯ ಬಗ್ಗೆ ಉಲ್ಲೇಖಿಸಿ ಚಾಮು ಕೃಷ್ಣಶಾಸ್ತ್ರಿ ಎಂಬುವವರು ಪ್ರಧಾನಿಗೆ ಟ್ವೀಟ್ ಮಾಡಿದ್ದರು. ಈ ಟ್ವಿಟ್ನಲ್ಲಿ ಅವರು, ” ಶ್ರೀಮತಿ ಅಪರ್ಣಾ ಮತ್ತು ಶ್ರೀ ದೇವದತ್ತ ಪಾಟೀಲ್ ಅವರ ಪುತ್ರನಾದ 16 ವರ್ಷದ ಪ್ರಿಯವ್ರತ ಇತಿಹಾಸವನ್ನು ನಿರ್ಮಾಣ ಮಾಡಿದ್ದಾನೆ. ತಮ್ಮ ತಂದೆಯಿಂದ ಈತ ವೇದ ಮತ್ತು ನ್ಯಾಯಗಳನ್ನು ಕಲಿಯುತ್ತಿದ್ದಾನೆ. ಈತ ಎಲ್ಲಾ ವ್ಯಾಕರಣ ಮಹಾಗ್ರಂಥಗಳನ್ನು ಶ್ರೀ ಮೋಹನ್ ಶರ್ಮಾ ಅವರಿಂದ ಕಲಿಯುತ್ತಿದ್ದಾನೆ. ತೆನಾಲಿ ಪರೀಕ್ಷೆ ಆಯೋಜನೆಗೊಳಿಸಿರುವ ‘ಮಹಾಪರೀಕ್ಷೆ’ಯಲ್ಲಿ ತೇರ್ಗಡೆ ಹೊಂದಿ ಇತಿಹಾಸ ನಿರ್ಮಿಸಿದ್ದಾನೆ” ಎಂದಿದ್ದಾರೆ.
ತೆನಾಲಿ ಪರೀಕ್ಷೆಯು ಲೆವಲ್ 14 ಪರೀಕ್ಷೆಗಳಾದ ‘ಮಹಾಪರೀಕ್ಷೆ’ಯನ್ನು ವರ್ಷಕ್ಕೆ ಎರಡು ಬಾರಿ ಆಯೋಜನೆಗೊಳಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.