ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ‘ಬೇಟಿ ಬಚಾವೋ ಬೇಟಿ ಪಡಾವೋ’ ಕಾರ್ಯಕ್ರಮದ ಅಡಿಯಲ್ಲಿ ಲಿಂಗಾನುಪಾತವನ್ನು ಸುಧಾರಿಸಿಕೊಂಡ ಮತ್ತು ಲಿಂಗ ಸಮಾನತೆಯ ಅರಿವನ್ನು ಮೂಡಿಸುವಲ್ಲಿ ಮಹತ್ವದ ಸಾಧನೆಯನ್ನು ಮಾಡಿದ ರಾಜ್ಯಗಳಿಗೆ ಮತ್ತು ಜಿಲ್ಲೆಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಕರ್ನಾಟಕದ ಗದಗ ಜಿಲ್ಲೆಯೂ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದೆ.
ಜನನದಿಂದಲೇ ಲಿಂಗ ಅನುಪಾತವನ್ನು ಸುಧಾರಿಸಿದ್ದಕ್ಕಾಗಿ ಹರಿಯಾಣ, ಉತ್ತರಾಖಂಡ, ದೆಹಲಿ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ಗೌರವಗಳನ್ನು ಪಡೆದುಕೊಂಡವು. ಕೇಂದ್ರ ಮಹಿಳಾ ಮತ್ತು ಕಲ್ಯಾಣ ಸಚಿವ ಹಾಗೂ ಟೆಕ್ಸ್ಟೈಲ್ ಸಚಿವೆ ಸ್ಮೃತಿ ಇರಾನಿಯವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಜನನದಿಂದಲೇ ಲಿಂಗಾನುಪಾತ ಸುಧಾರಣೆ ಮಾಡಿದ ಹತ್ತು ಜಿಲ್ಲೆಗಳನ್ನು ಸನ್ಮಾನಿಸಲಾಯಿತು. ಈಸ್ಟ್ ಕಾಮೆಂಗ್ (ಅರುಣಾಚಲ ಪ್ರದೇಶ), ಮಹೇಂದ್ರಘರ್ ಮತ್ತು ಭಿವಾನಿ (ಹರಿಯಾಣ), ಉಧಮ್ ಸಿಂಗ್ ನಗರ (ಉತ್ತರಾಖಂಡ), ನಮಕ್ಕಲ್ (ತಮಿಳುನಾಡು), ಜಲ್ಗಾಂವ್ (ಮಹಾರಾಷ್ಟ್ರ), ಇಟಾವಾ (ಉತ್ತರ ಪ್ರದೇಶ), ರಾಯ್ಘರ್(ಛತ್ತೀಸ್ಗಢ), ರೇವಾ (ರಾಜಸ್ಥಾನ) ಮತ್ತು ಜೋಧಪುರ (ರಾಜಸ್ಥಾನ)ಗಳು ಪ್ರಶಸ್ತಿಯನ್ನು ಪಡೆದುಕೊಂಡಿವೆ.
10 ಜಿಲ್ಲೆಗಳನ್ನು ಯೋಜನೆಯಡಿ ಅರಿವು ಮೂಡಿಸಿದ್ದಕ್ಕಾಗಿ ಮತ್ತು ಉತ್ತಮ ಕೆಲಸ ಮಾಡಿದ್ದಕ್ಕಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವುಗಳೆಂದರೆ ತಿರುವಳ್ಳೂರು (ತಮಿಳುನಾಡು), ಅಹಮದಾಬಾದ್ (ಗುಜರಾತ್), ಮಂಡಿ, ಶಿಮ್ಲಾ, ಸಿರ್ಮೌರ್ (ಹಿಮಾಚಲ ಪ್ರದೇಶ), ಕಿಶ್ತ್ವಾರ್ (ಜಮ್ಮುಕಾಶ್ಮೀರ), ಗದಗ (ಕರ್ನಾಟಕ), ವೋಖಾ (ನಾಗಾಲ್ಯಾಂಡ್), ಫರೂಕಾಬಾದ್ (ಉತ್ತರ ಪ್ರದೇಶ) ಮತ್ತು ನಗೌರ್ (ರಾಜಸ್ಥಾನ).
ಈ ಸಂದರ್ಭದಲ್ಲಿ ಸಚಿವೆ ಸ್ಮೃತಿ ಇರಾನಿ ಅವರು, ಅರುಣಾಚಲ ಪ್ರದೇಶದ ಪೂರ್ವ ಕಾಮಂಗ್ನ ಬಗ್ಗೆ ವಿಶೇಷ ಉಲ್ಲೇಖವನ್ನು ಮಾಡಿದರು. ಈ ಪ್ರದೇಶ ಲಿಂಗಾನುಪಾತದಲ್ಲಿ ಗಮನಾರ್ಹ ಬದಲಾವಣೆ ತೋರಿದ್ದು, 2014-15ರಲ್ಲಿ ಇಲ್ಲಿ 1000 ಗಂಡು ಮಕ್ಕಳಿಗೆ 807 ಹೆಣ್ಣುಮಕ್ಕಳು ಇದ್ದರು, ಆದರೆ ಈಗ 1000 ಗಂಡು ಮಕ್ಕಳಿಗೆ 1039 ಹೆಣ್ಣು ಮಕ್ಕಳಿದ್ದಾರೆ ಎಂದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ರವೀಂದರ್ ಪೊವಾರ್ ಮಾತನಾಡಿ, ”ಲಿಂಗಾನುಪಾತ ಕಡಿಮೆಯಾಗುತ್ತಿರುವುದು ಸರ್ಕಾರಕ್ಕೆ ಕಳವಳಕಾರಿ ವಿಷಯವಾಗಿದೆ. ಹುಟ್ಟುವುದರಿಂದ ಹಿಡಿದು ಹೆಣ್ಣು ಮಗು ಘನತೆಯಿಂದ ಬದುಕು ನಡೆಸುವ ಹಕ್ಕುಗಳನ್ನು ಸಂರಕ್ಷಿಸುವುದು ಬೇಟಿ ಬಚಾವೊ- ಬೇಟಿ ಪಡಾವೊ ಯೋಜನೆಯ ಗುರಿಯಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಅವರನ್ನು ಸಶಕ್ತಗೊಳಿಸುವುದು ಮುಖ್ಯ ಗುರಿಯಾಗಿದೆ” ಎಂದಿದ್ದಾರೆ.
ಗದಗ ಜಿಲ್ಲೆ #BetiBachaoBetiPadhao ಯೋಜನೆಯನ್ನು ಜಾರಿಗೊಳಿಸಿ,ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅದ್ಭುತ ಸಾಧನೆ ಮಾಡಿದ ಜಿಲ್ಲೆಗಳಿಗೆ ಕೇಂದ್ರ ಸರಕಾರ ರಾಷ್ಟ್ರೀಯ ಪುರಸ್ಕಾರ ನೀಡಿ ಅಭಿನಂದಿಸಿದೆ.
ಹೀಗೆ ಮುಂದುವರೆಯಿರಿ,ಗದಗ ಜಿಲ್ಲೆ, #Karnataka. #BBBP ತಂಡದಿಂದ ಉತ್ತಮ ಕೆಲಸ pic.twitter.com/VKyjpo4Uvh
— Smriti Z Irani (@smritiirani) September 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.