ನವದೆಹಲಿ: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವಾದ ಇಂದು ದೇಶದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಕ್ರೀಡಾ ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ಖೇಲ್ ರತ್ನ, ಅರ್ಜುನಾ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಧ್ಯಾನ್ ಚಂದ್ ಪ್ರಶಸ್ತಿಗಳನ್ನು ಇಂದು ರಾಷ್ಟ್ರಪತಿ ಭವನದಲ್ಲಿ ಸಾಧಕರಿಗೆ ಪ್ರದಾನಿಸಿ ಗೌರವಿಸಲಾಗುತ್ತಿದೆ.
ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ 19 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಅವರೆಂದರೆ- ತೇಜಿಂದರ್ ಪಾಲ್ ಸಿಂಗ್ ಟೂರ್ – ಅಥ್ಲೆಟಿಕ್ಸ್, ಮೊಹಮ್ಮದ್ ಅನಸ್ ಯಾಹಿಯಾ – ಅಥ್ಲೆಟಿಕ್ಸ್, ಎಸ್.ಭಾಸ್ಕರನ್, ಸೋನಿಯಾ ಲೆದರ್ – ಬಾಕ್ಸಿಂಗ್, ರವೀಂದ್ರ ಜಡೇಜಾ – ಕ್ರಿಕೆಟ್, ಚಿಂಗ್ಲೆನ್ಸನ್ಸ್ನಾ ಸಿಂಗ್ ಕಂಗುಜಮ್ – ಹಾಕಿ, ಅಜಯ್ ಠಾಕೂರ್ – ಕಬ್ಬಡಿ, ಗೌರವ್ ಸಿಂಗ್ – ಮೋಟಾರ್ ಸ್ಪೋರ್ಟ್ಸ್ (ಮೋಟಾರ್ ಸ್ಪೋರ್ಟ್ಸ್ನಲ್ಲಿ ಅರ್ಜುನ ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲು), ಪ್ರಮೋದ್ ಭಗತ್ – ಪ್ಯಾರಾ-ಬ್ಯಾಡ್ಮಿಂಟನ್, ಅಂಜುಮ್ ಮೌದ್ಗಿಲ್ – ಶೂಟಿಂಗ್, ಹರ್ಮೀತ್ ರಾಜುಲ್ ದೇಸಾಯಿ – ಟೇಬಲ್ ಟೆನಿಸ್, ಪೂಜಾ ಧಂಡಾ – ಕುಸ್ತಿ, ಫೌದ್ ಮಿರ್ಜಾ – ಕುದುರೆ ಸವಾರಿ, ಗುರ್ಪ್ರೀತ್ ಸಿಂಗ್ , ಸಂಧು – ಫುಟ್ಬಾಲ್, ಪೂನಂ ಯಾದವ್ – ಕ್ರಿಕೆಟ್, ಸ್ವಪ್ನಾ ಬರ್ಮನ್ – ಅಥ್ಲೆಟಿಕ್ಸ್, ಸುಂದರ್ ಸಿಂಗ್ ಗುರ್ಜರ್ – ಪ್ಯಾರಾ ಕ್ರೀಡೆ – ಅಥ್ಲೆಟಿಕ್ಸ್, ಸಾಯಿ ಪ್ರಣೀತ್ – ಬ್ಯಾಡ್ಮಿಂಟನ್, ಸಿಮ್ರಾನ್ ಸಿಂಗ್ ಶೆರ್ಗಿಲ್ – ಪೊಲೊ.
ದೀಪಾ ಮಲಿಕ್, ಬಜರಂಗ್ ಪೂನಿಯಾ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದ್ರೋಣಾಚಾರ್ಯ ಪ್ರಶಸ್ತಿಗೆ ಕ್ರೀಡಾ ಕೋಚ್ಗಳಾದ ವಿಮಲ್ ಕುಮಾರ್ (ಬ್ಯಾಡ್ಮಿಂಟನ್), ಸಂದೀಪ್ ಗುಪ್ತಾ (ಟೇಬಲ್ ಟೆನಿಸ್) ಮತ್ತು ಮೊಹಿಂದರ್ ಸಿಂಗ್ ಧಿಲ್ಲಾನ್ (ಅಥ್ಲೆಟಿಕ್ಸ್), ಮೆಜ್ಬಾನ್ ಪಟೇಲ್ (ಹಾಕಿ), ರಂಬೀರ್ ಸಿಂಗ್ ಖೋಕರ್ (ಕಬಡ್ಡಿ) ಮತ್ತು ಸಂಜಯ್ ಭಾರದ್ವಾಜ್ (ಕ್ರಿಕೆಟ್) ಆಯ್ಕೆಯಾಗಿದ್ದಾರೆ.
ಜೀವಮಾನ ಸಾಧನೆಗಾಗಿ 5 ಮಾಜಿ ಕ್ರೀಡಾಪಟುಗಳಾದ ಮ್ಯಾನ್ಯುಲ್ ಫೆಡರಿಕ್ಸ್ (ಹಾಕಿ), ಅನುಪ್ ಬಸಕ್ (ಟೇಬಲ್ ಟೆನ್ನಿಸ್), ಮನೋಜ್ ಕುಮಾರ್ (ರೆಸ್ಲಿಂಗ್), ನಿಟ್ಟೆನ್ ಕಿರ್ತನೆ (ಟೆನ್ನಿಸ್), ಲಾರೆಂಸಂಗ (ಆರ್ಚರಿ) ಧ್ಯಾನ್ಚಂದ್ ಪ್ರಶಸ್ತಿ ಪಡೆಯಲಿದ್ದಾರೆ.
ಖೇಲ್ರತ್ನ ಪ್ರಶಸ್ತಿಯು ಪದಕ, ಪ್ರಮಾಣಪತ್ರ, ರೂ.7.5 ಲಕ್ಷ ನಗದನ್ನು ಒಳಗೊಂಡಿರುತ್ತದೆ. ಅರ್ಜುನ ಪ್ರಶಸ್ತಿಯು ಅರ್ಜುನ ಪ್ರತಿಮೆ, ಪ್ರಮಾಣ ಪತ್ರ, ರೂ. 5 ಲಕ್ಷ ನಗದು, ದ್ರೋಣಾಚಾರ್ಯ ಪ್ರಶಸ್ತಿಯು ದ್ರೋಣಾಚಾರ್ಯ ಪ್ರತಿಮೆ, ಪ್ರಮಾಣಪತ್ರ, ರೂ. 5 ಲಕ್ಷ ನಗದು ಹಾಗೂ ಧ್ಯಾನ್ಚಂದ್ ಪ್ರಶಸ್ತಿಯು ಧ್ಯಾನ್ಚಂದ್ ಪ್ರತಿಮೆ, ಪ್ರಮಾಣ ಪತ್ರ, ರೂ. 5 ಲಕ್ಷ ನಗದನ್ನು ಒಳಗೊಂಡಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.