ಭುವನೇಶ್ವರ: ರಷ್ಯಾದ ಕಝಾನ ನಗರದಲ್ಲಿ ನಡೆದ ವರ್ಲ್ಡ್ ಸ್ಕಿಲ್ 2019 ಸ್ಪರ್ಧೆಯಲ್ಲಿ ಭುವನೇಶ್ವರದ ವಿದ್ಯಾರ್ಥಿ ಅಶ್ವತ್ ನಾರಾಯಣ್ ಅವರು ಬಂಗಾರದ ಪದಕವನ್ನು ಜಯಿಸುವ ಮೂಲಕ ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ.
ಆಗಸ್ಟ್ 23 ಮತ್ತು 27 ರ ನಡುವೆ ನಡೆದ ಸ್ಪರ್ಧೆಯಲ್ಲಿ ಅವರು ಜಲ ತಂತ್ರಜ್ಞಾನ ವಿಭಾಗದಲ್ಲಿ ಬಂಗಾರದ ಪದಕವನ್ನು ಗೆದ್ದಿದ್ದಾರೆ.
ವರ್ಲ್ಡ್ ಸ್ಕಿಲ್ 2019 ಸ್ಪರ್ಧೆಯಲ್ಲಿ ಭಾರತವು, ವೆಬ್ ಟೆಕ್ನಾಲಜಿಯಲ್ಲಿ ಬೆಳ್ಳಿ ಮತ್ತು ಆಭರಣ ಮತ್ತು ಗ್ರಾಫಿಕ್ ವಿನ್ಯಾಸ ತಂತ್ರಜ್ಞಾನದಲ್ಲಿ ಎರಡು ಕಂಚಿನ ಪದಕಗಳನ್ನು ಒಳಗೊಂಡಂತೆ ಒಟ್ಟು ನಾಲ್ಕು ಪದಕಗಳನ್ನು ಗೆದ್ದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ದ್ವೈವಾರ್ಷಿಕವಾಗಿ ನಡೆಯುವ 45 ನೇ ವರ್ಲ್ಡ್ ಸ್ಕಿಲ್ ಸ್ಪರ್ಧೆಯಲ್ಲಿ, ಭಾರತವು 48 ಸದಸ್ಯರ ತಂಡವನ್ನು ರಷ್ಯಾಕ್ಕೆ ಕಳುಹಿಸಿಕೊಟ್ಟಿತ್ತು. ಈ ತಂಡವು ಒಟ್ಟು 44 ಸ್ಕಿಲ್ ಸ್ಪರ್ಧೆಗಳಲ್ಲಿ ಭಾಗವಹಿಸಿದೆ.
ವ್ಯಾಪಾರದಲ್ಲಿ ಐಟಿ ಸಾಫ್ಟ್ ವೇರ್ ಸೊಲ್ಯೂಷನ್, ವೆಲ್ಡಿಂಗ್, ವಾಲ್ ಮತ್ತು ಫ್ಲೋರ್ ಟೈಲಿಂಗ್, ಆಟೋಬಾಡಿ ರಿಪೇರಿ, ಕಾರ್ ಪೇಂಟಿಂಗ್, ಆಟೋಮೊಬೈಲ್ ಟೆಕ್ನಾಲಜಿ, ಬ್ರಿಕ್ಲೇಯಿಂಗ್, ಮೊಬೈಲ್ ರೊಬೊಟಿಕ್ಸ್, ಪ್ಯಾಟಿಸ್ಸೆರಿ ಮತ್ತು ಕಾನ್ಫೆಕ್ಷನರಿ, ಆರೋಗ್ಯ ಮತ್ತು ಸಾಮಾಜಿಕ ಆರೈಕೆ, ದೃಶ್ಯ ವ್ಯಾಪಾರೋದ್ಯಮ, ಬೇಕರಿ, 3 ಡಿ ಗೇಮ್ ಆರ್ಟ್, ಸೈಬರ್ ಸೆಕ್ಯುರಿಟಿ ಮತ್ತು ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ಭಾರತ ಎಕ್ಸಲೆನ್ಸ್ ಮೆಡಲ್ಗಳನ್ನು ಜಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.