ರಾಯ್ಪುರ: ರಕ್ಷಾಬಂಧನದ ದಿನವಾದ ನಿನ್ನೆ ಛತ್ತೀಸ್ಗಢದ ಪೊಲೀಸ್ ಕಾನ್ಸ್ಟೆಬಲ್ ಕವಿತಾ ಕೌಶಲ್ ಅವರು ತನ್ನ ಸಹೋದರ ಬಳಸುತ್ತಿದ್ದ ಬಂದೂಕಿಗೆ ರಾಖಿಯನ್ನು ಕಟ್ಟಿದ್ದಾರೆ. ಈ ಬಂದೂಕನ್ನು ಅವರ ಸಹೋದರ ಸೇವೆಯಲ್ಲಿದ್ದಾಗ ಬಳಸುತ್ತಿದ್ದರು, ಈಗ ಅದನ್ನು ಇವರಿಗೆ ನೀಡಲಾಗಿದೆ.
ಛತ್ತೀಸ್ಗಢದ ಅರನ್ಪುರದಲ್ಲಿ ಅಕ್ಟೋಬರ್ 2018ರಲ್ಲಿ ನಡೆದ ಭೀಕರ ನಕ್ಸಲ್ ದಾಳಿಯಲ್ಲಿ ಆಕೆಯ ಸಹೋದರ ಅಸಿಸ್ಟೆಂಟ್ ಕಾನ್ಸ್ಟೆಬಲ್ ರಾಕೇಶ್ ಕೌಶಲ್ ಪ್ರಾಣ ಕಳೆದುಕೊಂಡಿದ್ದರು, ಈ ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು ಮತ್ತು ದೂರದರ್ಶನ ಕ್ಯಾಮೆರಾಪರ್ಸನ್ ಪ್ರಾಣವನ್ನು ಕಳೆದುಕೊಂಡಿದ್ದರು.
ಕಾನ್ಸ್ಟೆಬಲ್ ಕವಿತಾ ಕೌಶಲ್ ಅವರಿಗೆ ಅವರ ಸಹೋದರನ ಪರವಾಗಿ ಉದ್ಯೋಗವನ್ನು ನೀಡಲಾಗಿದೆ ಮತ್ತು ಅವರ ಸಹೋದರ ಸೇವೆಯಲ್ಲಿದ್ದಾಗ ಬಳಸುತ್ತಿದ್ದ ಬಂದೂಕನ್ನೇ ತನಗೆ ನೀಡುವಂತೆ ಇವರು ಇಲಾಖೆಗೆ ವಿನಂತಿಸಿದ್ದರು. ಅವರಿಗೆ ಇಲಾಖೆ ಅದೇ ಬಂದೂಕನ್ನು ನೀಡಿದೆ. ರಾಖಿ ಹಬ್ಬದ ದಿನ ಅವರು ಆ ಬಂದೂಕಿಗೆ ರಾಖಿಯನ್ನು ಕಟ್ಟಿದ್ದಾರೆ.
“ನಕ್ಸಲರು ಹೇಡಿಗಳು. ನಾನು ದಂತೇಶ್ವರಿ ಹೋರಾಟಗಾರರೊಂದಿಗೆ ಸೇರಲು ಬಯಸುತ್ತೇನೆ ಮತ್ತು ನನ್ನ ಸಹೋದರನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುತ್ತೇನೆ”ಎಂದು ಆಕೆ ಹೇಳಿದ್ದಾರೆ.
ದಂತೇಶ್ವರಿ ಫೈಟರ್ಸ್ ಸಂಪೂರ್ಣ ಮಹಿಳಾ ಕಮಾಂಡೋ ಘಟಕವಾಗಿದ್ದು, ನಕ್ಸಲ್ ಪೀಡಿತ ಬಸ್ತರ್ ಮತ್ತು ದಂತೇವಾಡದಲ್ಲಿ ಇವರನ್ನು ನಿಯೋಜಿಸಲಾಗಿದೆ. ತಂಡವು 30 ಮಹಿಳೆಯರನ್ನು ಒಳಗೊಂಡಿದೆ, ಅದರಲ್ಲಿ ನಾಲ್ವರು ಶರಣಾದ ನಕ್ಸಲ್ ಮಹಿಳೆಯರಾಗಿದ್ದಾರೆ.
ಅಕ್ಟೋಬರ್ 30, 2018 ರಂದು, ಛತ್ತೀಸ್ಗಢದ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು, ಸಿಆರ್ಪಿಎಫ್ ಗಸ್ತು ತಂಡ ಮತ್ತು ದೂರದರ್ಶನದ ಟಿವಿ ಸಿಬ್ಬಂದಿ ದಂತೇವಾಡ ಜಿಲ್ಲೆಯ ಅರನ್ಪುರ ಪ್ರದೇಶದಲ್ಲಿ ನಕ್ಸಲರು ದಾಳಿಯನ್ನು ಎದುರಿಸಿದ್ದರು. ಇದರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಒಬ್ಬ ಕ್ಯಾಮರಾಮನ್ ನಕ್ಸಲರ ದಾಳಿಗೆ ಸಿಕ್ಕು ಹುತಾತ್ಮರಾದರು. ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಭದ್ರತಾ ಸಿಬ್ಬಂದಿಗಳಲ್ಲಿ ಒಬ್ಬರು ಕಾನ್ಸ್ಟೆಬಲ್ ಕವಿತಾ ಅವರ ಸಹೋದರ ಸಹಾಯಕ ಕಾನ್ಸ್ಟೆಬಲ್ ರಾಕೇಶ್ ಕೌಶಲ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.