ಡೆಹ್ರಾಡೂನ್: ರಕ್ಷಾ ಬಂಧನ ಹತ್ತಿರ ಬರುತ್ತಿದೆ, ಈ ಸಂದರ್ಭದಲ್ಲಿ ಉತ್ತರಾಖಂಡದ ಅಜೀವಿಕಾ ಎಜುಕೇಶನ್ನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯರ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ, ಕೆಲವು ಸಂಪುಟ ಸಚಿವರುಗಳಿಗೆ ಮತ್ತು ಗಡಿಗಳಲ್ಲಿ ಕಾವಲು ಕಾಯುತ್ತಿರುವ ಸೇನಾ ಯೋಧರಿಗೆ ಕಳುಹಿಸಿಕೊಡಲು ರಾಖಿಗಳನ್ನು ಸಿದ್ಧಪಡಿಸುತ್ತಿದೆ.
ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನ ಒಂದೇ ದಿನ ಬರುತ್ತಿದೆ. ಹೀಗಾಗಿ ಈ ಯುವತಿಯರು ಸ್ವಾತಂತ್ರ್ಯ ದಿನದ ಥೀಮ್ನೊಂದಿಗೆ ಧಾನ್ಯಗಳನ್ನು ಬಳಸಿಕೊಂಡು ರಾಖಿಗಳನ್ನು ಸಿದ್ಧಪಡಿಸುತ್ತಿದ್ದಾರೆ.
“ರೈತರ ಉನ್ನತಿಗಾಗಿ ಸರ್ಕಾರ ಪ್ರಯತ್ನಗಳನ್ನು ಮಾಡಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲು ನಾವು ನಮ್ಮ ಎಲ್ಲಾ ರಾಖಿಗಳನ್ನು ಧಾನ್ಯಗಳಿಂದ ಮಾಡಿದ್ದೇವೆ. ಅಲ್ಲದೇ, ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ಸಹ ತೆಗೆದುಹಾಕಲಾಗಿದೆ ಎಂಬ ಸಂತೋಷ ನಮಗಿದೆ. ಅಂತಹ ನಿರ್ಧಾರವನ್ನು ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ನಾವು ಈ ರಾಖಿಗಳನ್ನು ಸಿದ್ಧಪಡಿಸುತ್ತಿದ್ದೇವೆ. ನಮ್ಮ ಎಲ್ಲಾ ರಾಖಿಗಳು ಕೈಯಿಂದ ತಯಾರಿಸಲ್ಪಟ್ಟವು ಮತ್ತು ಧಾನ್ಯಗಳನ್ನು ಬಳಸಿ ಮಾಡಲ್ಪಟ್ಟವು”ಎಂದು ರಾಖಿ ತಯಾರಿಕೆಯಲ್ಲಿ ನಿರತರಾದ ಯುವತಿಯೊಬ್ಬರು ಹೇಳಿದ್ದಾರೆ.
ದೇಶವನ್ನು ರಕ್ಷಿಸಿದ್ದಕ್ಕಾಗಿ ಸೇನೆ ಮತ್ತು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿರುವ ಮತ್ತೊಬ್ಬ ಯುವತಿ, “ನಾವು ಸ್ವಾತಂತ್ರ್ಯ ದಿನಾಚರಣೆಯ ವಿಷಯವನ್ನು ಆಧರಿಸಿ ರಾಖಿಗಳನ್ನು ಮಾಡಿದ್ದೇವೆ. ನಾವು ನಮ್ಮ ರಾಖಿಗಳಲ್ಲಿ ಧ್ವಜ ಮತ್ತು ಭಾರತದ ನಕ್ಷೆಯನ್ನು ರಚಿಸಿದ್ದೇವೆ. ಕಲಂ 370 ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಸರ್ಕಾರ ತೆಗೆದುಹಾಕಿದ್ದು ಒಳ್ಳೆಯದಾಗಿದೆ. ನಮಗೆ ರಕ್ಷಣೆ ನೀಡಿದ ಸೈನ್ಯ ಮತ್ತು ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.