ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಗುರುವಾರ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತರತ್ನವನ್ನು ನೀಡಿ ಗೌರವಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಕ್ಕೆ ಅತೀವ ಹೆಮ್ಮೆ ಎನಿಸಿದೆ ಎಂದು ಹೇಳಿಕೊಂಡಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ದೇಶದ ಬೆಳವಣಿಗೆಗೆ ಮಹೋನ್ನತವಾದ ಕೊಡುಗೆಯನ್ನು ನೀಡಿದಕ್ಕಾಗಿ ಪ್ರಣವ್ ಮುಖರ್ಜಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
“ಪ್ರಣವ್ ಮುಖರ್ಜಿಯವರೇ, ನೀವು ಭಾರತರತ್ನವನ್ನು ಸ್ವೀಕರಿಸುತ್ತಿರುವುದಕ್ಕೆ ಸಾಕ್ಷಿಯಾಗಿರುವುದು ನನಗೆ ಅತೀವ ಹೆಮ್ಮೆ ಎನಿಸಿದೆ. ನೀವು ನೀಡಿದ ಮಹತ್ತರವಾದ ಕೊಡುಗೆಗಳಿಗೆ ಈ ಪುರಸ್ಕಾರ ಅತ್ಯಂತ ಅರ್ಹವಾದುದಾಗಿದೆ. ಭಾರತವನ್ನು ಹೆಚ್ಚು ಅಭಿವೃದ್ಧಿಪಡಿಸುವ ಯಾವ ಅವಕಾಶವನ್ನೂ ಕೈಬಿಡದಕ್ಕಾಗಿ ಧನ್ಯವಾದಗಳು” ಎಂದಿದ್ದಾರೆ.
Dear @CitiznMukherjee,
It was an honour to witness you receiving the Bharat Ratna, a fitting recognition of everything that you have done for the nation.
Thank you for leaving no stone unturned towards making India more developed. pic.twitter.com/R6YNVDtjPF
— Narendra Modi (@narendramodi) August 9, 2019
ಅತ್ಯುನ್ನತವಾದ ಪುರಸ್ಕಾರವನ್ನು ನೀಡಿದ್ದಕ್ಕಾಗಿ ಮುಖರ್ಜಿಯವರು ವಿನಮ್ರತೆಯನ್ನು ವ್ಯಕ್ತಪಡಿಸಿದ್ದು, ” ರಾಷ್ಟ್ರಪತಿ ಅವರಿಗೆ ಮತ್ತು ದೇಶದ ಜನತೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು, ನಾನು ಕೊಟ್ಟಿದ್ದಕ್ಕಿಂತ ಹೆಚ್ಚಿನದನ್ನು ದೇಶದ ಜನರು ನನಗೆ ಪ್ರಶಸ್ತಿ ರೂಪದಲ್ಲಿ ನೀಡಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.