ನವದೆಹಲಿ: ಭಾರತದ ವಾಯುಗಡಿಯೊಳಗೆ ನುಸುಳಲು ಪ್ರಯತ್ನಿಸಿದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಸೇನೆಯ ಅತ್ಯುನ್ನತವಾದ ಗೌರವ ವೀರ ಚಕ್ರವನ್ನು ನೀಡಿ ಗೌರವಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಮಾತ್ರವಲ್ಲದೇ, ಬಾಲಕೋಟ್ ಒಳಗೆ ಮಿರಾಜ್-2000 ಯುದ್ಧ ವಿಮಾನದೊಂದಿಗೆ ನುಗ್ಗಿ ಬಾಂಬ್ ಹಾಕಿ ಉಗ್ರರ ಶಿಬಿರಗಳನ್ನು ಧ್ವಂಸಪಡಿಸಿದ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ಪೈಲೆಟ್ಗಳಿಗೂ ವಾಯುಸೇನೆಯ ಶೌರ್ಯ ಪದಕಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಹೇಳಲಾಗಿದೆ.
ಫೆ.27ರಂದು ಬಾಲಕೋಟ್ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತದ ವಾಯುಗಡಿಯಲ್ಲಿ ಒಳನುಸುಳಲು ಪ್ರಯತ್ನಿಸಿದ್ದ ಪಾಕಿಸ್ಥಾನ ಎಫ್-16 ಯುದ್ಧವಿಮಾನವನ್ನು ಅಭಿನಂದನ್ ಅವರು ಮಿಗ್-21 ವಿಮಾನದ ಮೂಲಕ ಅಟ್ಟಾಡಿಸಿಕೊಂಡು ಹೋಗಿ ಉರುಳಿಸಿದ್ದರು. ಈ ವೇಳೆ ಅವರ ವಿಮಾನವೂ ಪತನಗೊಂಡು ಪಿಓಕೆ ಪ್ರದೇಶಕ್ಕೆ ಬಿದ್ದಿದ್ದರು. ಈ ವೇಳೆ ಪಾಕಿಸ್ಥಾನಿಗಳು ಅವರನ್ನು ಬಂಧಿಸಿದ್ದರು. ಬಳಿಕ ಎರಡು ದಿನಗಳ ತರುವಾಯ ಅವರನ್ನು ವಿಧಿಯಿಲ್ಲದೆ ಪಾಕಿಸ್ಥಾನ ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಕಳುಹಿಸಿಕೊಟ್ಟಿತ್ತು.
ಅವರ ಈ ಶೌರ್ಯಕ್ಕಾಗಿ ವೀರ ಚಕ್ರ ನೀಡಿ ಗೌರವಿಸುವಂತೆ ವಾಯುಸೇನೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ. ಅಲ್ಲದೇ ಬಾಲಕೋಟ್ ವೈಮಾನಿಕ ದಾಳಿಯಲ್ಲಿ ಪಾಲ್ಗೊಂಡ ವಾಯುಸೇನೆಯ ಎಲ್ಲಾ ವೀರರಿಗೂ ಶೌರ್ಯಕ್ಕಾಗಿನ ಪದಕವನ್ನು ನೀಡಿ ಗೌರವಿಸಲಾಗುತ್ತದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.