ನವದೆಹಲಿ: ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಬಾಂಗ್ಲಾದೇಶದಲ್ಲಿ ಗೋಮಾಂಸ ವ್ಯಾಪಾರ ಭಾರೀ ಇಳಿಮುಖವಾಗಿದೆ. ಕೇಂದ್ರ ಸರ್ಕಾರ ಭಾರತ-ಬಾಂಗ್ಲಾ ಗಡಿಯಲ್ಲಿ ಕಟ್ಟುನಿಟ್ಟಿನ ಕಣ್ಗಾವಲನ್ನು ಏರ್ಪಡಿಸಿ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಿರುವುದೇ ಇದಕ್ಕೆ ಕಾರಣ.
ಭಾರತದಿಂದ ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಗೋವುಗಳು ಸಾಗಾಣೆಯಾಗುವುದನ್ನು ತಡೆಯಲೆಂದೇ ಸರ್ಕಾರ 30 ಸಾವಿರ ಬಿಎಸ್ಎಫ್ ಯೋಧರನ್ನು ನಿಯೋಜಿಸಿದೆ. ಪ್ರತಿನಿತ್ಯವೂ ಗೋ ಕಳ್ಳರ ಗುಂಪು ಯೋಧರ ಕೈಗೆ ಸಿಕ್ಕಿ ಬೀಳುತ್ತಿದೆ. ಇದರಿಂದಾಗಿ ಬಾಂಗ್ಲಾಗೆ ಭಾರತದ ಗೋವುಗಳು ಸಾಗಾಣೆಯಾಗುವ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದು ಬಾಂಗ್ಲಾದ ಗೋ ಮಾಂಸ ವ್ಯಾಪಾರದ ಮೇಲೆ ತೀವ್ರ ಹೊಡೆತ ನೀಡಿದೆ.
ಈ ಹಿಂದೆ ಪ್ರತಿವರ್ಷ 2 ಮಿಲಿಯನ್ ಹಸುಗಳು ಬಾಂಗ್ಲಾಗೆ ಕಳ್ಳ ಸಾಗಾಣೆಯಾಗುತ್ತಿದ್ದವು, ಇದರಿಂದ 600 ಮಿಲಿಯನ್ ಡಾಲರ್ ವ್ಯಾಪಾರವಾಗುತ್ತಿತ್ತು, ಬಾಂಗ್ಲಾದಲ್ಲಿ ಇದನ್ನು ಕಾನೂನಾತ್ಮಕ ಎಂದೇ ಪರಿಗಣಿಸಲಾಗಿದೆ. ಆದರೆ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಬಳಿಕ ಇದೆಲ್ಲದಕ್ಕೂ ಅಂತ್ಯ ಬಿದ್ದಿದೆ.
ಯೋಧರ ಕಣ್ಣು ತಪ್ಪಿಸಿ ಗೋವುಗಳನ್ನು ಸಾಗಾಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಬಾಂಗ್ಲಾದಲ್ಲಿ ಕಳೆದ ಆರು ತಿಂಗಳಿನಿಂದ ಗೋವುಗಳ ಬೆಲೆ ಶೇ.40ರಷ್ಟು ದುಬಾರಿಯಾಗಿದೆ. ಅಲ್ಲದೇ ಎರಡು ಗೋಹತ್ಯಾ ಯುನಿಟ್ಗಳನ್ನೂ ಬಂದ್ ಮಾಡಲಾಗಿದೆ. 4 ಸಾವಿರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದರಿಂದ ಬಾಂಗ್ಲಾದ ಆರ್ಥಿಕತೆಗೆ ಶೇ.3ರಷ್ಟು ನಷ್ಟವಾಗುತ್ತಿದೆ,
ಗಡಿಯಲ್ಲಿ ಯೋಧರನ್ನು ಕಣ್ಗಾವಲಿಗೆ ಇರಿಸುವ ಮೂಲಕ ಮೋದಿ ಸರ್ಕಾರ ಅಕ್ರಮ ಗೋಸಾಗಾಣೆಗೆ ಕಡಿವಾಣ ಹಾಕಿರುವುದು ಶ್ಲಾಘನೀಯ ಕಾರ್ಯ. ಇದರಿಂದ ಭಾರತೀಯ ಗೋ ತಳಿಗಳ ಸಂರಕ್ಷಣೆಯೂ ಸಾಧ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.