ನವದೆಹಲಿ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬುಧವಾರ ‘ಅಟಲ್ ಕಮ್ಯೂನಿಟಿ ಇನ್ನೋವೇಶನ್ ಸೆಂಟರ್’ ಅನ್ನು ನವದೆಹಲಿಯಲ್ಲಿ ಅನಾವರಣಗೊಳಿಸಿದ್ದಾರೆ. ಭಾರತದಲ್ಲಿ ಇನ್ನೋವೇಶನ್ ಅನ್ನು ಉತ್ತೇಜಿಸುವ ಸಲುವಾಗಿ ನೀತಿ ಆಯೋಗ ಮತ್ತು ಅಟಲ್ ಇನ್ನೋವೇಶನ್ ಮಿಶನ್ ಜಂಟಿಯಾಗಿ ಈ ಸೆಂಟರ್ ಅನ್ನು ಸ್ಥಾಪನೆ ಮಾಡಿದೆ.
ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ಅಟಲ್ ಇನ್ನೋವೇಶನ್ ಮಿಶನ್ ನಿರ್ದೇಶಕ ಆರ್.ರಾಮಾನನ್ ಮತ್ತು ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ್ ಅವರು, “2025 ರ ವೇಳೆಗೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಅಟಲ್ ಇನ್ನೋವೇಶನ್ ಮಿಷನ್ ಪ್ರಮುಖ ಪಾತ್ರ ವಹಿಸಲಿದೆ” ಎಂದಿದ್ದಾರೆ. ಅಲ್ಲದೇ, ಸ್ಥಳೀಯವಾಗಿ ಇನ್ನೋವೇಶನ್ ಉತ್ತೇಜಿಸಲು ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇನ್ನೋವೇಶನ್ ಕೇಂದ್ರಗಳನ್ನು ತೆರೆಯುವಂತೆ ಅವರು ನೀತಿ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಮಹತ್ವಾಕಾಂಕ್ಷೆಯ ಯೋಜನೆಯಾದ ಅಟಲ್ ಇನ್ನೋವೇಶನ್ ಮಿಶನ್ (ಎಐಎಂ) ಅಡಿಯಲ್ಲಿ ನೀತಿ ಆಯೋಗವು ಹೊಸ ಮೈಲಿಗಲ್ಲಿನ ಕಮ್ಯೂನಿಟಿ ಇನ್ನೋವೇಶನ್ ಪ್ರೋಗ್ರಾಂ ಅನ್ನು ಆರಂಭಿಸಿದೆ.
ಹೊಸ ಕಾರ್ಯಕ್ರಮವು ಭಾರತದಲ್ಲಿ ಇನ್ನೋವೇಶನ್ನಿನ ಸ್ಫೂರ್ತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಬಗ್ಗೆ ಮಾತನಾಡಿದ ಅಟಲ್ ಇನ್ನೋವೇಶನ್ ಮಿಶನ್ ನಿರ್ದೇಶಕ ಆರ್. ರಾಮಣ್ಣ ಅವರು, “ದೇಶದಲ್ಲಿನ ಇನ್ನೋವೇಶನ್ ಎಕೋ ಸಿಸ್ಟಮ್ ಅನ್ನು ಸಾಮಾಜಿಕವಾಗಿ ಹೆಚ್ಚು ಅಂತರ್ಗತ ಮಾಡುವುದು ಮತ್ತು ದೇಶದಾದ್ಯಂತ ಇನ್ನೋವೇಶನ್ ಮೂಲಸೌಕರ್ಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ” ಎಂದಿದ್ದಾರೆ.
#NITIAayog‘s @AIMtoInnovate launches Atal Community Innovation Centre to encourage innovation through solution driven design thinking, to serve the society.
Inaugurated in the presence of Union Minister @dpradhanbjp, VC @RajivKumar1, CEO @amitabhk87, @rramanan & NITI officials. pic.twitter.com/LPgTpyImBx
— NITI Aayog (@NITIAayog) July 31, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.