ಟೋಕಿಯೋ : ಜಪಾನಿನ ಟೋಕಿಯೋದಲ್ಲಿ 2020ರ ಒಲಿಂಪಿಕ್ ನಡೆಯಲಿದೆ. ಈಗಾಗಲೇ ಜಪಾನ್ ‘ಟೋಕಿಯೋ ಒಲಿಂಪಿಕ್’ಗಾಗಿ ಸಿದ್ಧತೆಗಳನ್ನು ನಡೆಸುತ್ತಿದೆ. ಒಲಿಂಪಿಕ್ ಆಯೋಜಕರು ಕ್ರೀಡಾಕೂಟಕ್ಕಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಅನಾವರಣಗೊಳಿಸಿದ್ದಾರೆ. ವಿಶೇಷವೆಂದರೆ ಈ ಪದಕಗಳನ್ನು ಹಳೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ರಿಸೈಕಲ್ ಮಾಡಿ ತಯಾರಿಸಲಾಗಿದೆ.
ವೃತ್ತಿಪರ ವಿನ್ಯಾಸಕರು ಮತ್ತು ವಿನ್ಯಾಸ ವಿದ್ಯಾರ್ಥಿಗಳಿಂದ 400 ಕ್ಕೂ ಹೆಚ್ಚು ನಮೂನೆಗಳನ್ನು ಪಡೆದುಕೊಂಡು ಒಲಿಂಪಿಕ್ ಪದಕಗಳ ವಿನ್ಯಾಸವನ್ನು ಆಯ್ಕೆ ಮಾಡಲಾಗಿದೆ. ಜುನಿಚಿ ಕವಾನಿಶಿ ಎಂಬ ವಿನ್ಯಾಸಕಾರ ರಚಿಸಿದ ನಮೂನೆ ಅಂತಿಮವಾಗಿ ಆಯ್ಕೆಯಾಗಿದೆ.
ಈ ಪದಕಗಳು ಜಪಾನಿನ ಮೆಟಲ್ ಮೌಲ್ಡಿಂಗ್ ಟೆಕ್ನಾಲಜಿಯನ್ನು ಜಗತ್ತಿಗೆ ತೋರಿಸುತ್ತದೆ ಎಂಬುದಾಗಿ ಕವಾನಿಶಿಯ ಅವರ ವಿನ್ಯಾಸವನ್ನು ಆಯ್ಕೆ ಮಾಡಿದ ಮಂಡಳಿಯ ಅಧ್ಯಕ್ಷರಾಗಿದ್ದ ರಿಯೋಹೆ ಮಿಯಾಟಾ ಹೇಳಿದ್ದಾರೆ.
ಟೋಕಿಯೋ 2020 ಒಲಿಂಪಿಕ್ಸ್ ಆರಂಭವಾಗಲು ಒಂದು ವರ್ಷಗಳ ಕೌಂಟ್ ಡೌನ್ ಅನ್ನು ಸಾಂಕೇತಿಕರಿಸುವ ಸಲುವಾಗಿ ನಡೆಸಲಾದ ಸಮಾರಂಭದಲ್ಲಿ ಈ ಪದಕಗಳನ್ನು ಅನಾವರಣಗೊಳಿಸಲಾಗಿದೆ. ಒಲಿಂಪಿಕ್ ಗೇಮ್ಸ್ಗೆ ಜಪಾನ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ರೀತಿಗೆ ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ ಮುಖ್ಯಸ್ಥ ಥೋಮಸ್ ಬಾಚ್ ಅವರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.
“ಒಲಿಂಪಿಕ್ ಆರಂಭವಾಗುವುದಕ್ಕೂ ಒಂದು ವರ್ಷಗಳ ಮುಂಚಿತವಾಗಿ, ಟೋಕಿಯೋ ಮಾದರಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡ ಯಾವುದೇ ನಗರವನ್ನು ನಾನು ಇದುವರೆಗೆ ನೋಡಿಲ್ಲ’ ಎಂದಿದ್ದಾರೆ.
“ಅಭೂತಪೂರ್ವ ಒಲಿಂಪಿಕ್ಸ್ ಆಯೋಜನೆಗೊಳಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳು ಈಗಲೇ ಸಜ್ಜುಗೊಂಡಿವೆ, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಅತ್ಯುತ್ತಮವಾದ ಅನುಭವವನ್ನು ನೀಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.