ಲಂಡನ್ : ಯುಕೆಯ ಹೊಸ ಪ್ರಧಾನಿ ಬೊರಿಸ್ ಜಾನ್ಸನ್ ಅವರ ಸಂಪುಟದಲ್ಲಿ ಭಾರತೀಯ ಸಂಜಾತೆ ಪ್ರೀತಿ ಪಟೇಲ್ ಅವರು ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಮಾಜಿ ಪ್ರಧಾನಿ ಥೆರೆಸಾ ಮೇ ಅವರ ಬ್ರೆಕ್ಸಿಟ್ ಕಾರ್ಯತಂತ್ರದ ತೀವ್ರ ಟೀಕಾಕಾರರಲ್ಲಿ ಪ್ರೀತಿ ಪಟೇಲ್ ಕೂಡ ಒಬ್ಬರಾಗಿದ್ದರು. ಮೊನ್ನೆಯಷ್ಟೇ ಥೆರೆಸಾ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದು, ಅವರ ಜಾಗಕ್ಕೆ ಜಾನ್ಸನ್ ನೇಮಕಗೊಂಡಿದ್ದಾರೆ.
ಪ್ರೀತಿ ಪಟೇಲ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ನಡೆದ “ಬ್ಯಾಕ್ ಬೋರಿಸ್” ಅಭಿಯಾನದ ಪ್ರಮುಖ ಸದಸ್ಯರಾಗಿದ್ದರು. ಇದೀಗ ಅವರು ಯುಕೆಯ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ತನ್ನ ನೇಮಕಕ್ಕೂ ಕೆಲವೇ ಗಂಟೆಗಳ ಮುಂಚೆ ಹೇಳಿಕೆ ನೀಡಿದ್ದ ಪ್ರೀತಿ, “ಸಂಪುಟವು ಆಧುನಿಕ ಬ್ರಿಟನ್ ಮತ್ತು ಆಧುನಿಕ ಕನ್ಸರ್ವೇಟಿವ್ ಪಕ್ಷವನ್ನು ಪ್ರತಿನಿಧಿಸುವುದು ಅತ್ಯಂತ ಮುಖ್ಯ” ಎಂದಿದ್ದರು.
47 ವರ್ಷದ ಪ್ರೀತಿ 2010 ರಲ್ಲಿ ಮೊದಲ ಬಾರಿಗೆ ಎಸೆಕ್ಸ್ನಲ್ಲಿ ವಿಥಮ್ಗೆ ಕನ್ಸರ್ವೇಟಿವ್ ಸಂಸದರಾಗಿ ಆಯ್ಕೆಯಾದರು ಮತ್ತು ಅಂದಿನ ಡೇವಿಡ್ ಕ್ಯಾಮರೂನ್ ನೇತೃತ್ವದ ಸರ್ಕಾರದಲ್ಲಿ ಅವರು ಭಾರತೀಯ ವಲಸೆಗಾರರ ಚಾಂಪಿಯನ್ ಆಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದರು.
ಸರ್ಕಾರದಲ್ಲಿನ ಕಿರಿಯ ಮಂತ್ರಿ ಹುದ್ದೆಗಳಿಗೆ ನೇಮಕಗೊಳ್ಳುತ್ತಾ ಸಾಗಿದ ಅವರು, 2014 ರಲ್ಲಿ ಖಜಾನೆ ಸಚಿವರಾಗಿ, ನಂತರ 2015 ರ ಸಾರ್ವತ್ರಿಕ ಚುನಾವಣೆಯ ನಂತರ ಉದ್ಯೋಗ ಸಚಿವರಾಗಿ ನೇಮಕಗೊಂಡರು. ಥೆರೆಸಾ ಮೇ ಅವರು ಇವರನ್ನು 2016 ರಲ್ಲಿ ಅಂತಾರಾಷ್ಟ್ರೀಯ ಅಭಿವೃದ್ಧಿ ಇಲಾಖೆಯಲ್ಲಿ (ಡಿಎಫ್ಐಡಿ) ರಾಜ್ಯ ಕಾರ್ಯದರ್ಶಿಯಾಗಿ ಬಡ್ತಿ ಮಾಡಿದರು, ಆದರೆ 2017 ರಲ್ಲಿ ಇವರು ಈ ಹುದ್ದೆಗೆ ರಾಜೀನಾಮೆ ನೀಡಿದರು.
“ಬೋರಿಸ್ ಜಾನ್ಸನ್ ಕನ್ಸರ್ವೇಟಿವ್ ಪಕ್ಷವನ್ನು ಮುನ್ನಡೆಸುವ ಮೂಲಕ ಮತ್ತು ಪ್ರಧಾನ ಮಂತ್ರಿಯಾಗುವ ಮೂಲಕ ಬ್ರಿಟನ್ ಮೇಲೆ ನಂಬಿಕೆಯಿಟ್ಟ ನಾಯಕನನ್ನು ಯುನೈಟೆಡ್ ಕಿಂಗ್ಡಮ್ ಹೊಂದಿದಂತಾಗಿದೆ. ಅವರು ದೇಶದ ಭವಿಷ್ಯಕ್ಕಾಗಿ ಹೊಸ ದೃಷ್ಟಿ ಮತ್ತು ಸ್ವ-ಆಡಳಿತ ರಾಷ್ಟ್ರವಾಗಿ ಮುಂದುವರಿಯಲು ಮತ್ತು ಅಭಿವೃದ್ಧಿ ಹೊಂದಲು ಒಂದು ಮಾರ್ಗಸೂಚಿಯನ್ನು ಜಾರಿಗೆ ತರಲಿದ್ದಾರೆ. ಈ ವಾರ ನಾಯಕತ್ವದ ಸ್ಪರ್ಧೆಯಲ್ಲಿ ಭರ್ಜರಿ ಜಯ ಸಾಧಿಸಿರುವ ಜಾನ್ಸನ್ ನಮ್ಮ ಸ್ನೇಹಿತರು ಮತ್ತು ಭಾರತದಂತಹ ಮಿತ್ರರಾಷ್ಟ್ರಗಳೊಂದಿಗಿನ ನಮ್ಮ ಸಂಬಂಧವನ್ನು ಪುನಃ ಸ್ಥಾಪಿಸುತ್ತಾರೆ “ಎಂದು ಪ್ರೀತಿ ಹೇಳಿದ್ದಾರೆ.
The Rt Hon Priti Patel @patel4witham has been appointed Secretary of State for the Home Department @ukhomeoffice pic.twitter.com/O5PCExDg8O
— UK Prime Minister (@10DowningStreet) July 24, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.