ನವದೆಹಲಿ: 2018-19ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ಆಗಸ್ಟ್ 31 ರವರೆಗೆ ಒಂದು ತಿಂಗಳುಗಳ ಕಾಲ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರ ಮಂಗಳವಾರ ಘೋಷಣೆ ಹೊರಡಿಸಿದೆ.
ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಬೇಕಾಗಿಲ್ಲದ ವೇತನ ಪಡೆಯುವ ತೆರಿಗೆದಾರರು ಮತ್ತು ಸಂಸ್ಥೆಗಳು ಸೇರಿದಂತೆ ವ್ಯಕ್ತಿಗಳು ತಮ್ಮ 2018-19ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಅನ್ನು (ಮೌಲ್ಯಮಾಪನ ವರ್ಷ 2019-20) 2019ರ ಜುಲೈ 31 ರೊಳಗೆ ಸಲ್ಲಿಸಬೇಕಾಗಿತ್ತು. ಆದರೀಗ ದಿನಾಂಕವನ್ನು ಆಗಸ್ಟ್ 31ಕ್ಕೆ ವಿಸ್ತರಣೆ ಮಾಡಲಾಗಿದೆ.
“ತೆರಿಗೆದಾರ ವರ್ಗಗಳಿಗೆ ಸಂಬಂಧಿಸಿದಂತೆ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವನ್ನು 2019 ರ ಜುಲೈ 31 ರಿಂದ 2019 ರ ಆಗಸ್ಟ್ 31 ರವರೆಗೆ ವಿಸ್ತರಿಸಿದೆ” ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
2018-19ರ ಹಣಕಾಸು ವರ್ಷದ ಸೋರ್ಸ್ (ಟಿಡಿಎಸ್) ಸ್ಟೇಟ್ಮೆಂಟ್ನಲ್ಲಿ ತೆರಿಗೆ ಕಡಿತವನ್ನು ವಿಳಂಬಗೊಳಿಸಿದಾಗಿನಿಂದ ಆದಾಯ ತೆರಿಗೆ ಪಾವತಿಯನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಗಳು ಕೇಳಿ ಬಂದಿತ್ತು.
ಆದಾಯ ತೆರಿಗೆ ಇಲಾಖೆಯು, ಉದ್ಯೋಗದಾತರಿಗೆ 2018-19ರ ಹಣಕಾಸು ವರ್ಷದ ಫಾರ್ಮ್ 16 ಟಿಡಿಎಸ್ ಪ್ರಮಾಣಪತ್ರವನ್ನು ತನ್ನ ಉದ್ಯೋಗಿಗಳಿಗೆ ನೀಡುವ ಕಾಲಾವಕಾಶವನ್ನು ಜುಲೈ 10 ರವರೆಗೆ ಅಂದರೆ 25 ದಿನಗಳವರೆಗೆ ವಿಸ್ತರಣೆ ಮಾಡಿತ್ತು.
ಇದರಿಂದಾಗಿ ಸಂಬಳ ಪಡೆಯುವ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೇವಲ 20 ದಿನಗಳ ಸೀಮಿತ ಅವಧಿಯನ್ನು ಪಡೆದುಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.