ಲಂಡನ್: ಬ್ರಿಟನ್ನಿನ ಮುಂದಿನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಆಯ್ಕೆಯಾಗಿದೆ. ಮಂಗಳವಾರ ಅವರು ಬ್ರಿಟನ್ನ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಮತ್ತು ಯುನೈಟೆಡ್ ಕಿಂಗ್ಡಂನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಅವರು ಅಧಿಕೃತವಾಗಿ ಅಧಿಕಾರವನ್ನು ಸ್ವೀಕಾರ ಮಾಡಲಿದ್ದಾರೆ. ಥೆರೆಸಾ ಮೇ ಕೆಳಗಿಳಿಯಲಿದ್ದಾರೆ.
ತನ್ನ ಬ್ರೆಕ್ಸಿಟ್ ಒಪ್ಪಂದವನ್ನು ಬ್ರಿಟಿಷ್ ಸಂಸತ್ತನಲ್ಲಿ ಅಂಗೀಕರಿಸಲು ವಿಫಲವಾದ ಕಾರಣದಿಂದಾಗಿ ಥೆರೆಸಾ ಮೇ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ. ಬೋರಿಸ್ ಜಾನ್ಸನ್ ಪ್ರಧಾನ ಮಂತ್ರಿಯಾಗಿ ಅವರ ಜಾಗವನ್ನು ರಿಪ್ಲೇಸ್ ಮಾಡುತ್ತಿದ್ದಾರೆ.
ಜಾನ್ಸನ್ ಮತ್ತು ಅವರ ಪ್ರತಿಸ್ಪರ್ಧಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ ಅವರು, ಕಳೆದ ತಿಂಗಳು ದೇಶವನ್ನು ಸುತ್ತಿ ಕನ್ಸರ್ವೇಟಿವ್ ಪಕ್ಷದ 200,000 ಸದಸ್ಯರ ಬೆಂಬಲವನ್ನು ಯಾಚಿಸಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಸದಸ್ಯರು ಬ್ರಿಟಿನ್ನಿನ ಹೊಸ ನಾಯಕನನ್ನು ಆರಿಸಿದ್ದಾರೆ. ಜಾನ್ಸನ್ ಕನ್ಸರ್ವೇಟಿವ್ ಪಕ್ಷದ 92,153 ಸದಸ್ಯರ ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ಗೆ 46,656 ಮತ ಸಿಕ್ಕಿದೆ.
ಜಾನ್ಸನ್ರ ಕನ್ಸರ್ವೇಟಿವ್ ಪಕ್ಷಕ್ಕೆ ಸಂಸತ್ತಿನಲ್ಲಿ ಬಹುಮತವಿಲ್ಲ ಮತ್ತು ಆಡಳಿತ ನಡೆಸಲು ಉತ್ತರ ಐರ್ಲೆಂಡ್ನ ಬ್ರೆಕ್ಸಿಟ್ ಬೆಂಬಲಿತ ಡೆಮಾಕ್ರಟಿಕ್ ಯೂನಿಯನಿಸ್ಟ್ ಪಕ್ಷದ 10 ಶಾಸಕರ ಬೆಂಬಲ ಬೇಕಾಗಿದೆ. ಆದರೂ ದೃಢ ಸರ್ಕಾರ ನಿಜಕ್ಕೂ ಕಠಿಣ ಹಾದಿಯೇ ಆಗಿದೆ. ಕೆಲವು ಶಾಸಕರು ಸರ್ಕಾರವನ್ನು ಉರುಳಿಸುವುದಾಗಿ ಈಗಾಗಲೇ ಬೆದರಿಕೆ ಹಾಕಿದ್ದಾರೆ, ಇದು ಬ್ರಿಟನ್ನ ರಾಜಕೀಯ ಬಿಕ್ಕಟ್ಟನ್ನು ಇನ್ನಷ್ಟು ಗಾಢವಾಗಿಸಲಿದೆ, ಅಲ್ಲದೇ ಚುನಾವಣೆಗೆ ಕಾರಣವಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.