ಕೋಲ್ಕತ್ತಾ: ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರಣಕ್ಕೆ, ತ್ರಿವಳಿ ತಲಾಖ್ ಪ್ರಕರಣದ ಅರ್ಜಿದಾರೆ ಇಶ್ರತ್ ಜಹಾನ್ ಅವರನ್ನು ಅವರ ನಾಲ್ಕು ಮಕ್ಕಳ ಸಮೇತ ಬಾಡಿಗೆ ಮನೆಯಿಂದ ಹೊರಹಾಕಿದ ಘಟನೆ ಪಶ್ಚಿಮ ಬಂಗಾಳದ ಹೌರಾ ಪಟ್ಟಣದಲ್ಲಿ ನಡೆದಿದೆ. ಮುಸ್ಲಿಂ ಸಮುದಾಯದ ಜನರಿಂದ ಅವರಿಗೆ ತೀವ್ರ ಸ್ವರೂಪದ ಬೆದರಿಕೆಗಳೂ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಜಹಾನ್ ತನ್ನ ಮಗನನ್ನು ಶಾಲೆಯಿಂದ ವಾಪಾಸ್ ಕರೆದುಕೊಂಡು ಬರುತ್ತಿದ್ದ ವೇಳೆ, ಸುಮಾರು 100 ಜನರ ಗುಂಪು ಅವರನ್ನು ಸುತ್ತುವರೆದು ಬಾಡಿಗೆ ಮನೆಯಿಂದ ಹೊರ ಹೋಗುವಂತೆ ಬೆದರಿಕೆ ಹಾಕಿತ್ತು, ಬಾಡಿಗೆ ಮನೆಯ ಮಾಲೀಕ ಕೂಡ ಮನೆ ಬಿಡುವಂತೆ ಆಕೆಗೆ ಧಮ್ಕಿ ಹಾಕಿದ ಎಂದು ಹೇಳಲಾಗಿದೆ.
ಕೋಲ್ಕತ್ತದಲ್ಲಿ ಆಯೋಜನೆಗೊಂಡಿದ್ದ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂಬ ಕಾರಣಕ್ಕಾಗಿ ಈ ಕೃತ್ಯವನ್ನು ಎಸಗಲಾಗಿದೆ ಎಂದು ಬಿಜೆಪಿಗೆ ಸೇರ್ಪಡೆಗೊಂಡಿರುವ ಜಹಾನ್ ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ಅವರು ದೂರು ನೀಡಿದ್ದಾರೆ.
ಧರ್ಮವನ್ನು ಉಲ್ಲಂಘನೆ ಮಾಡಿದ್ದೇನೆ ಎಂದು ಆರೋಪಿಸಿ ಜನರ ಗುಂಪು ನನ್ನ ಮೇಲೆ ದೌರ್ಜನ್ಯಕ್ಕೆ ಮುಂದಾಯಿತು ಎಂದು ಆಕೆ ಹೇಳಿಕೊಂಡಿದ್ದಾರೆ.
ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಹಾಕಿದವರಲ್ಲಿ ಇಶ್ರತ್ ಜಹಾನ್ ಕೂಡ ಒಬ್ಬರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.