ನವದೆಹಲಿ: ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಮಿರಾಜ್ 2000 ಫೈಟರ್ ಜೆಟ್ ಹಾರಾಟವನ್ನು ನಡೆಸುತ್ತಿದ್ದ ವೇಳೆ ಪತನಕ್ಕೀಡಾಗಿ ಮೃತಪಟ್ಟ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಅವರ ಪತ್ನಿ ಗರೀಮಾ ಅಬ್ರೋಲ್ ಅವರು ಶೀಘ್ರದಲ್ಲೇ ವಾಯುಪಡೆಯನ್ನು ಸೇರಲಿದ್ದಾರೆ. ಈಗಾಗಲೇ ‘ಸರ್ವಿಸ್ ಸೆಲಕ್ಷನ್ ಬೋರ್ಡ್’ ಪ್ರವೇಶಾತಿ ಸಂದರ್ಶನದಲ್ಲಿ ಅವರು ತೇರ್ಗಡೆಯಾಗಿದ್ದಾರೆ.
ಗರೀಮಾ ಅಬ್ರೋಲ್ ಅವರು ಶೀಘ್ರದಲ್ಲೇ ತೆಲಂಗಾಣದ ದುಂಡಿಗಲ್ನಲ್ಲಿರುವ ವಾಯುಪಡೆಯ ಅಕಾಡೆಮಿಯನ್ನು ಸೇರಲಿದ್ದಾರೆ. 2020ರ ಜನವರಿಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ನಿವೃತ್ತ ಏರ್ ಮಾರ್ಷಲ್ ಅನಿಲ್ ಚೋಪ್ರಾ ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಗರೀಮಾ ಅವರನ್ನು ‘ಅಸಾಧಾರಣ ಮಹಿಳೆ’ ಎಂದು ಟ್ವಿಟರಿನಲ್ಲಿ ಬಣ್ಣಿಸಿದ್ದಾರೆ. ಜೊತೆಗೆ ದಂಪತಿಯ ಫೋಟೋ ಮತ್ತು ಅಬ್ರೋಲ್ ಅವರ ಇತ್ತೀಚಿನ ತರಬೇತಿಯ ನಂತರದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಫೆಬ್ರವರಿ 1 ರಂದು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಪರೀಕ್ಷಾರ್ಥ ಮಿರಾಜ್ 2000 ಫೈಟರ್ ಜೆಟ್ ಟೇಕ್ ಆಫ್ ಮಾಡುತ್ತಿದ್ದಾಗ ಪತನಗೊಂಡಿತ್ತು. ಸ್ಕ್ವಾಡ್ರನ್ ನಾಯಕರಾದ ಸಮೀರ್ ಅಬ್ರೋಲ್ (33) ಮತ್ತು ಸಿದ್ಧಾರ್ಥ ನೇಗಿ (31) ಮೃತಪಟ್ಟಿದ್ದರು.
ಪತಿಯನ್ನು ಕಳೆದುಕೊಂಡ ದುಃಖದಲ್ಲಿ ಗರೀಮಾ ಅವರು, ಹಳೆಯ ಯುದ್ಧ ವಿಮಾನಗಳನ್ನು ಬಳಸಲಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಅವರು ಪತಿಯ ಹಾದಿಯಲ್ಲೇ ಸಾಗಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ವಾಯುಪಡೆ ಸೇರುತ್ತಿದ್ದಾರೆ.‘ದೇಶ ಸೇವೆಗೆ ವಾಯುಪಡೆ ಸೇರಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
Mrs Garima Abrol, wife of Sqn ldr Samir Abrol who martyred in Mirage2000 fighter plane crash while test flying it at HAL Airport. To join Air Force Academy. Woman of exceptional substance and will join @IAF_MCC in Jan 2020.
Not all woman are made equal some are Armed forces Wives pic.twitter.com/gY7G8pV7f3— Aviator Anil Chopra (@Chopsyturvey) July 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.