ನವದೆಹಲಿ: ನೇಪಲ್ಸ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀಟರ್ನಲ್ಲಿ ಬಂಗಾರದ ಪದಕವನ್ನು ಜಯಿಸಿದ ಭಾರತೀಯ ಸ್ಪ್ರಿಂಟರ್ ದ್ಯುತಿ ಚಂದ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬುಧವಾರ ಅಭಿನಂದಿಸಿದ್ದಾರೆ.
“ನೇಪಲ್ಸ್ನಲ್ಲಿ ನಡೆದ ಯೂನಿವರ್ಸಿಯೇಡ್, ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ನಲ್ಲಿ 100 ಮೀ ಸ್ಪ್ರಿಂಟ್ ಗೆದ್ದ ದ್ಯುತಿ ಚಂದ್ ಅವರಿಗೆ ಅಭಿನಂದನೆಗಳು. ಇದು ಭಾರತದ ಮೊದಲ ಚಿನ್ನವಾಗಿದೆ ಮತ್ತು ನಮ್ಮ ದೇಶಕ್ಕೆ ಇದು ಅಪಾರ ಹೆಮ್ಮೆಯ ಕ್ಷಣವಾಗಿದೆ. ಪ್ರಯತ್ನವನ್ನು ಮುಂದುವರಿಸಿ ಮತ್ತು ಒಲಿಂಪಿಕ್ಸ್ನಲ್ಲಿ ಹೆಚ್ಚಿನ ಸಾಧನೆ ಮಾಡುವತ್ತ ಗಮನಹರಿಸಿ” ಎಂದು ರಾಷ್ಟ್ರಪತಿಗಳು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
Congratulations @DuteeChand for winning the 100m sprint at the Universiade, the World University Games, in Naples. This is India’s first such gold and a moment of immense pride for our country. Please keep up the effort, and look to greater glory at the Olympics #PresidentKovind
— President of India (@rashtrapatibhvn) July 10, 2019
ಕೇವಲ 11.32 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ದ್ಯುತಿ ಅವರು ಈ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆಯನ್ನು ಮಾಡಿದ್ದಾರೆ. ಅವರು 11.24 ಸೆಕೆಂಡುಗಳಲ್ಲಿ 100 ಮೀ ಓಡಿದ ಮಹತ್ವದ ರಾಷ್ಟ್ರೀಯ ದಾಖಲೆಯನ್ನು ದ್ಯುತಿ ಹೊಂದಿದ್ದಾರೆ. ಜಾಗತಿಕ ಕ್ರೀಡಾಕೂಟದಲ್ಲಿ 100 ಮೀ ಓಟದಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
“ಅಸಾಧಾರಣ ಕ್ರೀಡಾಪಟುವಿನಿಂದ ಅಸಾಧಾರಣ ಸಾಧನೆ. ಮಹಿಳೆಯರ 100 ಮೀಟರ್ ಫೈನಲ್ನಲ್ಲಿ ಅತ್ಯಂತ ಪರಿಶ್ರಮದ ಮತ್ತು ಅರ್ಹ ಬಂಗಾರದ ಪದಕ ಜಯಿಸಿದ್ದಕ್ಕೆ ಅಭಿನಂದನೆಗಳು ದ್ಯುತಿ ಚಂದ್. ಭಾರತವನ್ನು ನೀನು ಹೆಮ್ಮೆ ಪಡಿಸಿದ್ದೀಯ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Exceptional achievement of an exceptional athlete!
Congratulations @DuteeChand for winning a hard earned and well deserved Gold in the Women’s 100 m finals.
You make India proud! #Universiade @FISU https://t.co/LVSkbsPZOP
— Narendra Modi (@narendramodi) July 10, 2019
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜ್ಜು ಅವರು ಕೂಡ ದ್ಯುತಿ ಚಂದ್ ಅವರಿಗೆ ಟ್ವಿಟರ್ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
I’ve been passionately following since my childhood but it never came. Finally, for the first time, a gold for India! Congratulations @DuteeChand for winning the 100m sprint at the Universiade, the World University Games, in Naples🇮🇳 pic.twitter.com/Rh4phsKCEI
— Kiren Rijiju (@KirenRijiju) July 10, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.