ನವದೆಹಲಿ: ಗುರುನಾನಕ್ ದೇವ್ ಅವರ 550 ನೇ ಪಾರ್ಕಾಶ್ ಪರ್ಬ್ ಅನ್ನು ಸ್ಮರಿಸುವ ಸಲುವಾಗಿ ನವೆಂಬರ್ 12 ರಂದು ಸುಲ್ತಾನಪುರ ಲೋಧಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ನೇತೃತ್ವದಲ್ಲಿ ಶಿರೋಮಣಿ ಅಕಾಲಿ ನಿಯೋಗವು, ಪ್ರಧಾನಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಸಮಾರಂಭಕ್ಕೆ ಹಾಜರಾಗುವಂತೆ ಆಹ್ವಾನಿಸಿದೆ. ನಿಯೋಗದಲ್ಲಿ ಎಸ್ಜಿಪಿಸಿ ಅಧ್ಯಕ್ಷ ಗೋಬಿಂದ್ ಸಿಂಗ್ ಲಾಂಗೋವಾಲ್ ಮತ್ತು ಕೇಂದ್ರ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಕೂಡ ಇದ್ದರು.
ಗುರುನಾನಕ್ ಅವರ 550 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆಯೂ ನಿಯೋಗ ಮೋದಿಗೆ ವಿವರಿಸಿದೆ.
ಮೋದಿಯವರು ಸಮಾರಂಭದಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಮೊದಲ ಸಿಖ್ ಗುರುವೂ ಆಗಿರುವ ನಾನಕ್ ಅವರ ಜನ್ಮಸ್ಥಳವಾದ ಪಾಕಿಸ್ಥಾನದ ನಂಕನಾ ಸಾಹಿಬ್ನಿಂದ ಜುಲೈ 25 ರಂದು ಪ್ರಾರಂಭವಾಗುವ ‘ನಗರ ಕೀರ್ತನೆ’ಗೆ ಬೇಕಾಗುವ ಎಲ್ಲಾ ಏರ್ಪಾಡುಗಳನ್ನು ನಡೆಸುವಂತೆಯೂ ವಿದೇಶಾಂಗ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ ಎಂದು ಸುಖ್ಬೀರ್ ಹೇಳಿದ್ದಾರೆ.
ವಿಶ್ವದಾದ್ಯಂತ ಇರುವ ಸಿಖ್ ಅನುಯಾಯಿಗಳು ಗುರುನಾನಕ್ ಅವರು ಭೇಟಿ ನೀಡಿದ ಎಲ್ಲಾ ಸ್ಥಳಗಳಲ್ಲೂ ಅವರ ಸ್ಮರಣಾರ್ಥ ಕಾರ್ಯಗಳನ್ನು ಆಯೋಜಿಸುವ ಮೂಲಕ ಗುರು ನಾನಕ್ ಜಯಂತಿಯನ್ನು ಆಚರಿಸಲು ಬಯಸುತ್ತಿದ್ದಾರೆ ಎಂದು ಸುಖ್ಬೀರ್ ಮೋದಿಯವರಿಗೆ ತಿಳಿಸಿದ್ದಾರೆ.
ಭಾರತೀಯ ರಾಯಭಾರ ಕಛೇರಿಯ ಮೂಲಕವೇ ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸುವ ಭರವಸೆಯನ್ನು ಮೋದಿ ಅವರಿಗೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.