ನವದೆಹಲಿ: 17ನೇ ಲೋಕಸಭೆಯ ಅಧಿವೇಶನ ಆರಂಭವಾದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಆರೋಗ್ಯಯುತ ಪ್ರಜಾಪ್ರಭುತ್ವಕ್ಕಾಗಿ ಪ್ರತಿಪಕ್ಷಗಳ ರಚನಾತ್ಮಕ ಪಾತ್ರದ ಬಗ್ಗೆ ಒತ್ತಿ ಹೇಳಿದರು. ಅಲ್ಲದೇ, ಪ್ರತಿಪಕ್ಷಗಳು ತಮ್ಮ ಸಂಖ್ಯೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು.
ಸಂಸತ್ತಿನ ಹೊರಗಡೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರತಿಪಕ್ಷಗಳ ಪ್ರತಿ ಮಾತು ಕೂಡ ಅತ್ಯಂತ ಮೌಲ್ಯಯುತವಾದುದು. ಪ್ರತಿಪಕ್ಷಗಳು ತಮ್ಮ ಸಂಖ್ಯೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅವರು ಅತ್ಯಂತ ಸಕ್ರಿಯವಾಗಿ ಮಾತನಾಡುತ್ತಾರೆ ಮತ್ತು ಕಲಾಪಗಳಲ್ಲಿ ಭಾಗಿಯಾಗುತ್ತಾರೆ ಎಂಬ ನಂಬಿಕೆ ಇದೆ” ಎಂದಿದ್ದಾರೆ.
“ಪಕ್ಷಕ್ಕಿಂತಲೂ ವಿಪಕ್ಷ ಮತ್ತು ನಿಷ್ಪಕ್ಷದ ಸ್ಪೂರ್ತಿ ಮುಖ್ಯವಾದುದು. ಮುಂದಿನ ಐದು ವರ್ಷಗಳ ಕಾಲ ಈ ಸ್ಪೂರ್ತಿಯೇ ಸಂಸತ್ತಿನ ಘನತೆಯನ್ನು ಸಂರಕ್ಷಿಸುತ್ತದೆ” ಎಂದರು.
“ಕ್ರಿಯಾಶೀಲ ಪ್ರತಿಪಕ್ಷದ ಪಾತ್ರ ಅತ್ಯಂತ ಮುಖ್ಯವಾಗಿದೆ. ಅವರು ತಮ್ಮ ಸಂಖ್ಯೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅವರು ಸಕ್ರಿಯವಾಗಿ ಮಾತನಾಡುತ್ತಾರೆ ಮತ್ತು ಕಲಾಪಗಳಲ್ಲಿ ಭಾಗಿಯಾಗುತ್ತಾರೆ ಎಂಬ ಭರವಸೆ ಇದೆ” ಎಂದಿದ್ದಾರೆ.
“ಜನರು ನಮಗೆ ಮತ್ತೊಮ್ಮೆ ದೇಶಕ್ಕಾಗಿ ಸೇವೆ ಮಾಡುವ ಅವಕಾಶವನ್ನು ನೀಡಿದ್ದಾರೆ. ಈ ಜನಾದೇಶವನ್ನು ಗೌರವಿಸಿ ನಮ್ಮೊಂದಿಗೆ ಕಾರ್ಯನಿರ್ವಹಿಸಿ ಎಂದು ಸರ್ವ ಪಕ್ಷಗಳಿಗೂ ಮನವಿ ಮಾಡುತ್ತೇನೆ” ಎಂದರು.
ಈ ವರ್ಷ ಹೆಚ್ಚಿನ ಸಂಖ್ಯೆಯ ಮಹಿಳಾ ಸಂಸದರು ಇದ್ದಾರೆ ಎಂಬ ಬಗ್ಗೆ ಸಂತಸ ವ್ಯಕ್ತಪಡಿಸಿದ ಮೋದಿ, ಹಿಂದಿನ ಅವಧಿಯ ಅಧಿವೇಶನಕ್ಕಿಂತಲೂ ಈ ಬಾರಿಯ ಅಧಿವೇಶನ ಹೆಚ್ಚು ಫಲದಾಯಕವಾಗಿರುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.