ನವದೆಹಲಿ: ದೇಶದ 25 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 2019-20ರ ಸಾಲಿನಲ್ಲಿ ಸುಮಾರು 2,700ಕ್ಕೂ ಅಧಿಕ ಸೀಟುಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಒಂದೇ ವರ್ಷದಲ್ಲಿ ಇಷ್ಟೊಂದು ಪ್ರಮಾಣದ ಸೀಟುಗಳನ್ನು ಸೇರ್ಪಡೆಗೊಳಿಸಿರುವುದು ನಿಜಕ್ಕೂ ದೊಡ್ಡ ನಿರ್ಧಾರವೇ ಆಗಿದೆ.
ವರದಿಯ ಪ್ರಕಾರ, 2019-20ರ ಶೈಕ್ಷಣಿಕ ಸಾಲಿನಲ್ಲಿ ದೇಶದ 25 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 2,750 ಸೀಟುಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡುವ ಮೂಲಕ ಮತ್ತು ಪ್ರಸ್ತುತ ಇರುವ ಕಾಲೇಜುಗಳಲ್ಲೇ ಕೇಂದ್ರದ ಅನುದಾನಗಳ ಮೂಲಕ ಸೀಟುಗಳನ್ನು ವಿಸ್ತರಣೆ ಮಾಡುವ ಮೂಲಕ ವೈದ್ಯಕೀಕ ಸೀಟುಗಳ ಪ್ರಮಾಣವನ್ನು ಹೆಚ್ಚಳಗೊಳಿಸುವ ಪ್ರಕ್ರಿಯೆಯನ್ನು ಸರ್ಕಾರ ನಡೆಸುತ್ತಾ ಬಂದಿದೆ.
ಸೀಟುಗಳ ವಿಸ್ತರಣೆಯ ಮೂಲಕ ಪ್ರಸ್ತುತ ದೇಶದ 529 ವೈದ್ಯಕೀಯ ಕಾಲೇಜುಗಳಲ್ಲಿ 70,978 ಎಂಬಿಬಿಎಸ್ ಸೀಟುಗಳು ಇದ್ದಂತಾಗಿದೆ. ಈ ಒಟ್ಟು ಕಾಲೇಜುಗಳ ಪೈಕಿ 269 ಕಾಲೇಜುಗಳು ಸರ್ಕಾರಿ ಕಾಲೇಜುಗಳಾಗಿದ್ದು, ಇಲ್ಲಿ 35,688 ಸೀಟುಗಳಿವೆ. ಉಳಿದ 260 ಕಾಲೇಜುಗಳು ಖಾಸಗಿ ವಲಯದ ಕಾಲೇಜುಗಳಾಗಿದ್ದು, ಇಲ್ಲಿ 35,290 ಸೀಟುಗಳಿವೆ.
ಸೀಟುಗಳ ಸಂಖ್ಯೆಯನ್ನು ವಿಸ್ತರಣೆಗೊಳಿಸುವ ಮೂಲಕ ಬೋಧಕ ಸಿಬ್ಬಂದಿಯನ್ನು ಭರ್ತಿ ಮಾಡುವ ಸವಾಲು ಕೂಡ ಎದುರಾಗಿದೆ. ಸರ್ಕಾರದ ಪ್ರಯತ್ನದ ಹೊರತಾಗಿಯೂ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರುಗಳ ಕೊರತೆ ಇದ್ದೇ ಇದೆ.
ಈಗಾಗಲೇ ಸರ್ಕಾರ ನಿವೃತ್ತ ವಯಸ್ಸನ್ನು ಹೆಚ್ಚಳಗೊಳಿಸುವ ಮೂಲಕ ಮತ್ತು ಶಸ್ತ್ರಾಸ್ತ್ರ ಪಡೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವವರನ್ನು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರನ್ನಾಗಿಸುವ ಕಾರ್ಯಕ್ರಮವನ್ನೂ ಆಯೋಜಿಸಿದೆ ಎಂದು ನೀತಿ ಆಯೋಗದ ಸದಸ್ಯ ಹಾಗೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಮುಖ್ಯಸ್ಥ ಡಾ.ವಿನೋದ್ ಪೌಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.