ನವದೆಹಲಿ: ಈ ವರ್ಷದ ಅಂತ್ಯದೊಳಗೆ ದೇಶದ ಪ್ರತಿ ಮನೆಗೂ ಅಡುಗೆ ಅನಿಲ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕಾರ್ಯೋನ್ಮುಖಗೊಂಡಿದೆ. ಈ ಹಿನ್ನಲೆಯಲ್ಲಿ 2019-20ರ ಸಾಲಿನ ಬಜೆಟ್ನಲ್ಲಿ ಉಜ್ವಲ ಯೋಜನೆಯನ್ನು ನವೀಕರಿಸುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಬಜೆಟ್ ಭಾಷಣ ಮಾಡಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಜ್ವಲ ಯೋಜನೆಯ ಗುರಿಯಾದ 80 ದಶಲಕ್ಷ ಅಡುಗೆ ಅನಿಲ ಸಂಪರ್ಕವನ್ನು ಸರ್ಕಾರಕ್ಕೆ 100 ದಿನಗಳು ಪೂರೈಸುವ ಮುಂಚಿಯೇ ತಲುಪುವ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಯೋಜನೆಯಡಿ 71.8 ದಶಲಕ್ಷ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗಿದೆ.
ಮುಂಬರುವ ತಿಂಗಳುಗಳಲ್ಲಿ ಎಲ್ಲಾ ಬಡವರ ಮನೆಗಳನ್ನೂ ಒಳಗೊಳ್ಳುವ ಸಲುವಾಗಿ 10-20 ಮಿಲಿಯನ್ ಎಲ್ಪಿಜಿ ಸಿಲಿಂಡರ್ಗಳನ್ನು ಒದಗಿಸಲು ಕೇಂದ್ರ ಮುಂದಾಗಿದೆ.
ಈ ಟಾರ್ಗೆಟ್ ತಲುಪುವುದು ಸಾಧ್ಯವಾದರೆ, ಪ್ರಸ್ತುತ ಶೇ.93ರಿಂದ 94ರಷ್ಟು ಅಡುಗೆ ಅನಿಲವನ್ನು ಹೊಂದಿರುವ ಭಾರತ ಶೇ.100ರಷ್ಟು ಸಾಧನೆಯನ್ನು ಮಾಡಲಿದೆ. ಸರ್ಕಾರವು 5 ಕೆಜಿ ತೂಕದ ಸಿಲಿಂಡರ್ ಬಳಕೆಯನ್ನು ಉತ್ತೇಜಿಸುವ ಕಾರ್ಯವನ್ನೂ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.